ತುಮಕೂರು : ಖಾಸಗಿ ಆಂಬುಲೆನ್ಸ್ ಸಂಚಾರಕ್ಕೆ ದರ ನಿಗದಿ!!

 ತುಮಕೂರು :

      ಸರಕಾರದ ಮಾರ್ಗಸೂಚಿಯಂತೆ ಕೋವಿಡ್ ಸೋಂಕಿತರು ಹಾಗೂ ಶವಸಾಗಾಟಕ್ಕಾಗಿ ಪಡೆಯುತ್ತಿದ್ದ ಖಾಸಗಿ ಆಂಬುಲೆನ್ಸ್‍ಗಳ ದರವನ್ನು ನಿಗದಿಗೊಳಿಸಿ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಆದೇಶಿಸಿದ್ದಾರೆ.

     ರೋಗಿಗಳ ಸಾಗಾಟದ ಸಾಮಾನ್ಯ ಆಂಬುಲೆನ್ಸ್‍ನ ಪ್ರತೀ 10 ಕಿ.ಮೀ ಸಂಚಾರಕ್ಕೆ 1500 ದರ ನಿಗದಿ ಮಾಡಿದ್ದು, ಹೆಚ್ಚುವರಿ ಕಿ.ಮೀಗೆ ಪ್ರತಿ ಕಿ.ಮೀಗೆ 120 ದರ ಪಾವತಿಸಬೇಕಿದೆ.

      ಪ್ರತೀ ಗಂಟೆಗೆ ಕಾಯುವ ದರ 200 ರೂ.ಗಳೆಂದು ನಿಗದಿಪಡಿಸಲಾಗಿದೆಅಂತೆಯೇ ಬೇಸಿಕ್ ಲೈಫ್ ಸಪೋರ್ಟ್ ಆಂಬುಲೆನ್ಸ್‍ಗೆ ಪ್ರತೀ 10 ಕಿ.ಮೀಗೆ 2000 ದರ ನಿಗದಿ ಪಡಿಸಿದ್ದು, ಹೆಚ್ಚುವರಿ ಕಿಲೋಮೀಟರ್‍ಗೆ ಪ್ರತೀಕಿ.ಮೀಗೆ 120 ರೂ. ಪ್ರತೀ ಗಂಟೆಗೆ ಕಾಯುವ ದರ 250 ರೂ.ಗಳನ್ನು ಪಾವತಿಸಬೇಕಿದೆ.

      ಮೇಲ್ಕಾಣಿಸಿದಂತೆ ನಿಗದಿಗೊಳಿಸಿರುವ ದರವು ಇಂಧನ ವೆಚ್ಚ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್‍ಶೀಲ್ಡ್, ಸ್ಯಾನಿಟೈಸೇಷನ್, ಚಾಲಕ, ಇಎಂಟಿ ಇತರೆ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ. ಹೆಚ್ಚುವರಿ ದರಕ್ಕೆ ಬೇಡಿಕೆಯಿಟ್ಟಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೊ. 9742649999 ಅನ್ನು ಸಂಪರ್ಕಿಸಲು ಕೋರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap