ನಡುರಸ್ತೆಯಲ್ಲಿ ಆಂಬ್ಯುಲೆನ್ಸ್‌ ನಿಲ್ಲಿಸಿ ಹೆಣ ಇಳಿಸಿದ ಕುಟುಂಬಸ್ಥರು

ಲಖನೌ: 

     ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನಿಂದ ಕೆಳಗೆ ಇಳಿಸಿದ್ದಾರೆ. ಈ ಮೂಲಕ ಕುಟುಂಬ ಸದಸ್ಯರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರು. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದ ಘಟನೆಯಿದು. ಶುಕ್ರವಾರ, ಮದ್ಯದ ವ್ಯವಹಾರದ ಬಗ್ಗೆ ಪರಸ್ಪರ ಜಗಳ ನಡೆದಾಗ ಹೃದಯ್ ಲಾಲ್ ಎಂಬವರನ್ನು ನಿರ್ದಯವಾಗಿ ಥಳಿಸಲಾಯಿತು.

    ಹಲ್ಲೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಲಖನೌಗೆ ಕಳುಹಿಸಲಾಯಿತು, ಅಲ್ಲಿ ಅವರು ನಿಧನರಾದರು. ಅವರಿಗೆ ಮದುವೆಯಾಗಿ ಎರಡು ತಿಂಗಳಾಗಿತ್ತು. ಹೃದಯ್ ಲಾಲ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

    ಸೋಮವಾರ ಲಾಲ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿದ್ದಾಗ, ಅವರ ಕುಟುಂಬ ಸದಸ್ಯರು ಶವವನ್ನು ರಸ್ತೆಗೆ ಇಳಿಸಿದರು. ಶವವನ್ನು ಆಂಬ್ಯುಲೆನ್ಸ್‌ನಿಂದ ರಸ್ತೆಗೆ ಬೀಳಿಸುವುದನ್ನು ವಿಡಿಯೊದಲ್ಲಿ ನೋಡಬಹುದು. ಕೆಲವೇ ಸೆಕೆಂಡುಗಳಲ್ಲಿ, ಕುಟುಂಬದ ಸದಸ್ಯರು ಬಂದು ಹೆದ್ದಾರಿಯ ಮಧ್ಯದಲ್ಲಿ ಕುಳಿತರು, ಶವವನ್ನು ರಸ್ತೆ ಮಧ್ಯ ಇಟ್ಟು ಧರಣಿ ಕೂತರು.

   ಇನ್ನೂ ಅನೇಕರು ಬಂದು ಪ್ರತಿಭಟನೆಯಲ್ಲಿ ರಸ್ತೆ ತಡೆ ಮಾಡಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಶವವನ್ನು ರಸ್ತೆಯಿಂದ ಹೊರತೆಗೆದು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದರು. ನಂತರ, ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇನ್ನು ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕಾನೂನು ಕ್ರಮ ಆರಂಭಿಸಿದ್ದಾರೆ ಎಂದು ಗೊಂಡಾ ವೃತ್ತ ಅಧಿಕಾರಿ ಆನಂದ್ ಕುಮಾರ್ ರಾಯ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link