ವಾಷಿಂಗ್ಟಂನ್ :
ಅಮೆರಿಕಾದ ಅತ್ಯಂತ ಹಿರಿಯ ಮಹಿಳೆ ಎಂದೆನಿಸಿಕೊಂಡಿದ್ದ ಎಲಿಜಬೆತ್ ಫ್ರಾನ್ಸಿಸ್ ಮಂಗಳವಾರ ನಿಧನ ಹೊಂದಿದ್ದಾರೆ. ಅವರು ತಮ್ಮ115 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು, ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿಗಳ ಅಂಕಿ ಅಂಶಗಳನ್ನು ಸಂಗ್ರಹಿಸುವ ಲೊಂಗ್ವೆಕ್ವೆಸ್ಟ್ ಮಾಹಿತಿಯ ಪ್ರಕಾರ ಎಲಿಜಬೆತ್ ಫ್ರಾನ್ಸಿಸ್ ಅಮೆರಿಕಾದಲ್ಲಿ ವಾಸಿಸುತಿರುವ ಅತ್ಯಂತ ಹಿರಿಯ ವ್ಯಕ್ತಿ. ಇವರು ವಿಶ್ವದ 3ನೇ ಹಿರಿಯ ವ್ಯಕ್ತಿಯಾಗಿದ್ದರು.
ಎಲೆಜೆಬೆತ್ ಫ್ರಾನ್ಸಿಸ್ ತನ್ನ ಮೊಮ್ಮಗಳ ಜೊತೆ ವಾಸವಿದ್ದು, ತನ್ನ ಬಹುಪಾಲು ಜೀವನವನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಕಳೆದಿದ್ದಾಳೆ. ಫ್ರಾನ್ಸಿಸ್ ಮೊಮ್ಮಗಳು ಫ್ರಾನ್ಸಿಸ್ ಈ ಬಗ್ಗೆ ಮಾತನಾಡಿದ್ದು, ಆಕೆ ಎಲ್ಲರನ್ನು ಪ್ರೀತಿಸುವಂತ ಸ್ವಭಾವದವಳಾಗಿದ್ದಳು. ಅವಳು ಜೀವನದ ಮೇಲೆ ಬಲವಾದ ನಂಬಿಕೆ ಹೊಂದಿದ್ದಳು. ಎಲ್ಲರ ಬಳಿ ಪ್ರೀತಿಯಿಂದ ಮಾತನಾಡುತ್ತಿದ್ದಳು ಎಂದು ಹೇಳಿದ್ದಾರೆ.
ಎಲಿಜಬೆತ್ ಫ್ರಾನ್ಸಿಸ್ ಜುಲೈ 25, 1909 ರಂದು ಲೂಯಿಸಿಯಾನದಲ್ಲಿ ಜನಿಸಿದರು. 1ನೇ ಮಹಾಯುದ್ಧದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳಿಗೆ ಆಕೆ ಸಾಕ್ಷಿಯಾಗಿದ್ದಳು. ಹೂಸ್ಟನ್‌ನಲ್ಲಿ ಕಾಫಿ ಅಂಗಡಿಯನ್ನು ನಡೆಸುತ್ತಿದ್ದ ಅವಳು ತನ್ನ ಮಗಳನ್ನು ಸಿಂಗಲ್ ಪೇರೇಂಟ್ ಆಗಿಯೇ ಬೆಳೆಸಿದಳು. ಈ ವರ್ಷದ ಆರಂಭದಲ್ಲಿ ಆಕೆ ತನ್ನ 115ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅಮೆರಿಕಾದಲ್ಲಿ ವಾಸವಿರುವ ಅತ್ಯಂತ ಹಿರಿಯ ಮಹಿಳೆ ಎಂದೇ ಖ್ಯಾತಳಾಗಿದ್ದರು ಹಾಗೂ ವಿಶ್ವದ ಮೂರನೇ ಹಿರಿಯ ನಾಗರಿಕರಾಗಿ ಮನ್ನಣೆ ಪಡೆದಿದ್ದರು.
ಲೊಂಗ್ವೆಕ್ವೆಸ್ಟ್‌ನ ಮುಖ್ಯಸ್ಥ ಎಲಿಜಬೆತ್ ಫ್ರಾನ್ಸಿಸ್‌ನನ್ನು ಅಮೆರಿಕಾದ ಅಜ್ಜಿ ಎಂದು ಕರೆದಿದ್ದಾರೆ. ಎಲಿಜಬೆತ್ ಫ್ರಾನ್ಸಿಸ್ ಬಗ್ಗೆ ಬಣ್ಣಿಸಿರುವ ಅವರು ” ಆಕೆ ದೇವರ ಬಗ್ಗೆ ಅತಿಯಾದ ವಿಶ್ವಾಸ ಮತ್ತು ನಂಬಿಕೆ ಹೊಂದಿದ್ದಳು ಹಾಗೂ ಕುಟುಂಬವನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಸಮಾಜದಲ್ಲಿ ಮಾದರಿಯಾಗಿ ಬದುಕಿದ್ದಳು ಎಂದು ಹೇಳಿದ್ದಾರೆ.
115 ರ ವಯಸ್ಸಿನಲ್ಲೂ ಜೀವನದಲ್ಲಿ ಅತೀ ಉತ್ಸಾಹದಲ್ಲಿದ್ದ ಅಜ್ಜಿ ವ್ಯಾಯಾಮಕ್ಕೆ ಹೆಚ್ಚು ಮಹತ್ವ ನೀಡುತ್ತದ್ದರು. ಪ್ರತಿನಿತ್ಯ ವಾಕಿಂಗ್ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಖುಷಿಯಾದ ಜೀವನವನ್ನು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು. ತಮ್ಮ ಮೊಮ್ಮಗಳೊಂದಿಗಿರುವ ಎಲೆಜೆಬೆತ್ ಟಿವಿಯಲ್ಲಿ ಗುಡ್ ಟೈಮ್ಸ್ ಹಾಗೂ ಜೆಫರ್ಸನ್‌ನ ಹಳೆ ಸಂಚಿಕೆಗಳನ್ನು ನೋಡಲು ಇಷ್ಟಪಡುತ್ತಿದ್ದರಂತೆ. ನಾವು ನಮ್ಮ ಅಜ್ಜಿಯ ಜತೆ ಈ ಇಳಿಯ ವಯಸ್ಸಿನಲ್ಲೂ ಅವರೊಟ್ಟಿಗೆ ವಾಸಿಸುತ್ತೇವೆ ಎಂದು ಹೇಳಿಕೊಳ್ಳಲು ನಮಗೆ ಖುಷಿಯಾಗುತ್ತದೆ ಎಂದು ಅವರ ಮೊಮ್ಮಕ್ಕಳು ಹೇಳಿದ್ದಾರೆ.
