ನವದೆಹಲಿ
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕ ಜೊತೆ ಸ್ನೇಹ ಬೆಸೆದ ಮರುಕ್ಷಣವೇ ಯುದ್ಧದ ಭೀತಿ ಆವರಿಸಿತ್ತು. ಆದರೆ ಕೆಲ ದಿನಗಳಿಂದ ಪರಿಸ್ಥಿತಿ ಸರಿ ಹೋಗುತ್ತಿತ್ತು. ಇದೀಗ ಅಮೆರಿಕ ಸೇನೆ ಮತ್ತೆ ತೈವಾನ್ ಬಳಿ ಸೇನಾ ಹಡಗನ್ನು ತಂದು ಶಾಂತಿ ಕದಡಿದೆ.
ಅಷ್ಟಕ್ಕೂ ಚೀನಾ ಸೇನೆ ತೈವಾನ್ ದ್ವೀಪದ ಸುತ್ತಲ್ಲೂ ತನ್ನ ಸೇನೆ ನಿಯೋಜನೆ ಮಾಡಿ, ಅತ್ಯಂತ ಉಗ್ರ ರೂಪದಲ್ಲಿ ಸೇನಾ ಸಮರಭ್ಯಾಸ ನಡೆಸಿತ್ತು. ಅಲ್ಲದೆ ತೈವಾನ್ ವಿರುದ್ಧ ಯುದ್ಧ ಸಾರುವುದು ಪಕ್ಕಾ ಎಂದಿದ್ದರು ಚೀನಾ ಅಧ್ಯಕ್ಷ ಜಿನ್‌ಪಿಂಗ್. ಇದು ಮುಗಿದು, ಸ್ವಲ್ಪ ದಿನದಿಂದ ಚೀನಾ ಕೂಡ ಸೈಲೆಂಟ್ ಆಗಿದೆ. ಇದೇ ಹೊತ್ತಲ್ಲಿ ತೈವಾನ್ ಜಲಸಂಧಿಯ ಮೂಲಕ ಅಮೆರಿಕದ ಯುದ್ಧನೌಕೆ ಯುಎಸ್ಎಸ್ ಮಿಲಿಯಸ್ ಪ್ರಯಾಣ ಬೆಳೆಸಿದೆ. ಮತ್ತೆ ಚೀನಾ ಸೇನೆಯನ್ನ ಕೆರಳುವಂತೆ ಮಾಡಿರುವ ಈ ಘಟನೆ, ಮಹಾಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ.








