ಚಂಡೀಘಡ:
ಅಮೆರಿಕದಲ್ಲಿ ಕೆಲಸ ಸಿಕ್ಕರೆ ಸಾಕು ಜೀವನ ಸೆಟ್ಲ್ ಆಗುತ್ತೆ ಎಂಬುದು ಕೆಲವರು ಕನಸು!ಆದರೆ ಇಲ್ಲೊಬ್ಬ ವ್ಯಕ್ತಿ ಅಮೆರಿಕದಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಮೊಹಾಲಿಯ ರಸ್ತೆಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡು ಫುಡ್ ಸೇಲ್ ಮಾಡುತ್ತಿದ್ದಾನಂತೆ. ಅಮೆರಿಕದ ಐಟಿ ಕ್ಷೇತ್ರದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದ ಮಣಿಂದರ್ ಸಿಂಗ್, ಅಲ್ಲಿನ ಕೆಲಸ ಬಿಟ್ಟು ಭಾರತಕ್ಕೆ ವಾಪಾಸ್ ಬಂದಿದ್ಯಾಕೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೊದಲ್ಲಿ ಮಣಿಂದರ್ ಸಿಂಗ್ ತನ್ನ ನ್ಯೂಯಾರ್ಕ್ ಡ್ರೈವಿಂಗ್ ಲೈಸೆನ್ಸ್ ಪ್ರದರ್ಶಿಸುವುದು ಕಂಡುಬಂದಿದೆ. ಹಾಗೇ ಅವರು ಅಮೆರಿಕದಲ್ಲಿ ಮೂರು ವರ್ಷಗಳ ಕಾಲ ಮಾಡಿದ ತನ್ನ ಕೆಲಸದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾನೆ. ಆತ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದರಂತೆ .ಇದರಿಂದ ಅಮೆರಿಕಕ್ಕೆ ಹೋಗಲು ಅವಕಾಶ ಸಿಕ್ಕಿತ್ತು. ಆದರೆ ಅವರ ತಂದೆಯ ಹಠಾತ್ ನಿಧನದಿಂದ ಅವರು ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಬಂದ ಅವರಿಗೆ ಫುಡ್ ಟ್ರಕ್ ಮಾಡುವ ಐಡಿಯಾ ಬಂದಿದೆ. ಅದಕ್ಕೆ ಅವರ ಹೆಂಡತಿ ಕೂಡ ಕೈ ಜೋಡಿಸಿದ್ದಾರೆ. ಅದು ಅಲ್ಲದೇ,ಆತನ ಪತ್ನಿಗೆ ಅಡುಗೆ ಮಾಡುವುದರಲ್ಲಿ 20 ವರ್ಷಗಳ ಅನುಭವವಿದ್ದ ಕಾರಣ ಆಕೆ ಫುಡ್ ಸ್ಟಾಲ್‍ನಲ್ಲಿ ಅಡುಗೆ ತಯಾರಿಸುವ ಕೆಲಸ ಮಾಡುತ್ತಾಳಂತೆ.
ಈ ದಂಪತಿಯ ಫುಡ್ ಸ್ಟಾಲ್‌ನಲ್ಲಿ ರಾಜ್ಮಾ-ಚಾವಲ್, ರೊಟ್ಟಿ, ಮಾವಿನ ಲಸ್ಸಿ, ಸಲಾಡ್, ಎಗ್ ಕರಿ ಫೇಮಸ್ ಅಂತೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
