ಅಮೆರಿಕಕ್ಕೆ ಮತ್ತಷ್ಟು ಬಲ; 179 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ʼಗೋಲ್ಡ್‌ನ್‌ ಡೋಮ್‌ʼ ನಿರ್ಮಾಣ!

ವಾಷಿಂಗ್ಟನ್‌:

    ದಾಳಿಗಳಿಂದ ದೇಶವನ್ನು ರಕ್ಷಿಸಲು “ಗೋಲ್ಡನ್ ಡೋಮ್”  ಕ್ಷಿಪಣಿ ಗುರಾಣಿ ವ್ಯವಸ್ಥೆಯ ಯೋಜನೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮಂಗಳವಾರ ಅನಾವರಣಗೊಳಿಸಿದರು, ಇದು ಸುಮಾರು ಮೂರು ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಗೆ ಆರಂಭಿಕವಾಗಿ 25 ಬಿಲಿಯನ್ ಡಾಲರ್ ಹಣವನ್ನು ಘೋಷಿಸಿದ್ದರು. ಈ ಯೋಜನೆಯ ಒಟ್ಟು ವೆಚ್ಚ 175 ಬಿಲಿಯನ್ ಡಾಲರ್ ಆಗಬಹುದು ಎಂದು ತಿಳಿದು ಬಂದಿದೆ. ಚೀನಾ ಮತ್ತು ರಷ್ಯಾ ಒಡ್ಡುವ ಬೆದರಿಕೆಗಳಿಂದ ಅಮೆರಿಕವನ್ನು ರಕ್ಷಿಸುವ ಗುರಿಯನ್ನು ಇದು ಹೊಂದಿದೆ.

    ಶ್ವೇತಭವನದಿಂದ ಮಾತನಾಡಿದ ಟ್ರಂಪ್, ಯೋಜನೆಗೆ ಅಂತಿಮ ವಿನ್ಯಾಸವನ್ನು ಆಯ್ಕೆ ಮಾಡಿರುವುದಾಗಿ ಮತ್ತು ಯುಎಸ್ ಬಾಹ್ಯಾಕಾಶ ಪಡೆ ಜನರಲ್ ಮೈಕೆಲ್ ಗುಟ್ಲೀನ್ ಅವರನ್ನು ಉಪಕ್ರಮದ ಮುಖ್ಯಸ್ಥರನ್ನಾಗಿ ನೇಮಿಸಿರುವುದಾಗಿ ಘೋಷಿಸಿದ್ದಾರೆ. ಗೋಲ್ಡನ್ ಡೋಮ್ ನಮ್ಮ ತಾಯ್ನಾಡನ್ನು ರಕ್ಷಿಸುತ್ತದೆ” ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಹೇಳಿದ್ದಾರೆ. ನಾನು ಅಮೆರಿಕಾದ ಜನರಿಗೆ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ಗುರಾಣಿಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದೆ “ಈ ಅತ್ಯಾಧುನಿಕ ವ್ಯವಸ್ಥೆಗೆ ನಾವು ಅಧಿಕೃತವಾಗಿ ವಾಸ್ತುಶಿಲ್ಪವನ್ನು ಆಯ್ಕೆ ಮಾಡಿದ್ದೇವೆ ಎಂದು ಇಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಂಪೂರ್ಣವಾಗಿ ನಿರ್ಮಾಣವಾದ ನಂತರ, ಗೋಲ್ಡನ್ ಡೋಮ್ ಕ್ಷಿಪಣಿಗಳನ್ನು ಪ್ರಪಂಚದ ಇತರ ಕಡೆಗಳಿಂದ ಉಡಾಯಿಸಿದರೂ ಮತ್ತು ಬಾಹ್ಯಾಕಾಶದಿಂದ ಉಡಾಯಿಸಿದರೂ ಸಹ ಅವುಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

    ಟ್ರಂಪ್ ಜೊತೆ ಮಾತನಾಡಿದ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್, ಈ ವ್ಯವಸ್ಥೆಯು “ತಾಯ್ನಾಡನ್ನು ಕ್ರೂಸ್ ಕ್ಷಿಪಣಿಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್ಸಾನಿಕ್ ಕ್ಷಿಪಣಿಗಳು, ಡ್ರೋನ್‌ಗಳು, ಹಾಗೂ ಪರಮಾಣು ಬಾಂಬ್‌ಗಳಿಂದ ನಮ್ಮ ದೇಶವನ್ನು ಕಾಪಾಡುತ್ತದೆ ಎಂದು ತಿಳಿಸಿದ್ದಾರೆ.

    ಯೋಜನೆಯಲ್ಲಿ ಭಾಗಿಯಾಗಿರುವ ಖಾಸಗಿ ಕಂಪನಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಡೆಮಾಕ್ರಟಿಕ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಯೋಜನೆಯು ಕಾರ್ಯರೂಪಕ್ಕೆ ಬರಲು ವರ್ಷಗಳೇ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಜನವರಿ 2029 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಟ್ರಂಪ್ ಆದೇಶಿಸಿದ್ದಾರೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಅಮೆರಿಕದ ಸೇನಾ ಶಕ್ತಿ ಮತ್ತಷ್ಟು ಬಲಗೊಳ್ಳಲಿದೆ.

Recent Articles

spot_img

Related Stories

Share via
Copy link