ಉಕ್ರೇನ್‌ -ಇಸ್ರೇಲ್‌ ಯುದ್ಧ : ಅಮೇರಿಕ ಎಚ್ಚರಿಕೆ

ವಾಷಿಂಗ್ಟನ್: 

 ತಾತ್ಕಾಲಿಕ ಕದನ ವಿರಾಮದ ಬಳಿಕ ಗಾಜಾಪಟ್ಟಿಯಲ್ಲಿ ತನ್ನ ಸೇನಾದಾಳಿ ಮುಂದುವರೆಸಿರುವ ಇಸ್ರೇಲ್ ಕ್ರಮವನ್ನು ಅಮೆರಿಕ ಖಂಡಿಸಿದೆ. ಗಾಜಾದಲ್ಲಿ ಇಸ್ರೇಲ್ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದು, ಇದರಿಂದ ಅಲ್ಲಿನ ಸ್ಥಳೀಯರು ತಮ್ಮ ಮನೆ-ಆಸ್ತಿಪಾಸ್ತಿಗಳನ್ನು ತೊರೆದು ಜೀವರಕ್ಷಣೆಗಾಗಿ ಓಡುವಂತಾಗಿದೆ. ಶತಾಯಗತಾಯ ಹಮಾಸ್ ಸಮಸ್ಯೆಯನ್ನು ಬಗೆಹರಿಸಲೇಬೇಕು ಎಂದು ಪಣತೊಟ್ಟಂತಿರುವ ಇಸ್ರೇಲ್ ಸೇನೆ ದಿನೇ ದಿನೇ ತನ್ನ ದಾಳಿ ತೀವ್ರಗೊಳಿಸುತ್ತಾ ಸಾಗಿದೆ. ಇಸ್ರೇಲ್ ನ ಈ ಕಾರ್ಯವೇ ಇದೀಗ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ‘ಗಾಜಾದಲ್ಲಿ ತನ್ನ ವಿವೇಚನಾರಹಿತ ಬಾಂಬ್ ದಾಳಿಯಿಂದಾಗಿ ಇಸ್ರೇಲ್ ಜಾಗತಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ ಎಂದು ಮಂಗಳವಾರ ಎಚ್ಚರಿಸಿದ್ದಾರೆ. ಅಲ್ಲದೆ ಎರಡು ರಾಷ್ಟ್ರ ಪರಿಹಾರ ಕ್ರಮವನ್ನು ವಿರೋಧಿಸಿರುವ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಒಕ್ಕೂಟದ ಸದಸ್ಯರ ನಿಲುವನ್ನು ಜೋ ಬೈಡನ್ ಟೀಕಿಸಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

    ವಾಷಿಂಗ್ಟನ್‌ನಲ್ಲಿ ಎಐಪಿಎಸಿ ಮಂಡಳಿಯ ಮಾಜಿ ಅಧ್ಯಕ್ಷ ಲೀ ರೋಸೆನ್‌ಬರ್ಗ್ ಆಯೋಜಿಸಿದ್ದ ಪ್ರಚಾರ ನಿಧಿಸಂಗ್ರಹಣೆಯ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿದ ಬೈಡನ್,  ‘ನೆತನ್ಯಾಹು ಒಳ್ಳೆಯ ಸ್ನೇಹಿತ, ಆದರೆ ಅವರು ಬದಲಾಗಬೇಕು ಎಂದು ನಾನು ಭಾವಿಸುತ್ತೇನೆ, ಮತ್ತು ಇಸ್ರೇಲ್‌ನಲ್ಲಿ ಈ ಸರ್ಕಾರವು ಅವರಿಗೆ ಚಲಿಸಲು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.

    ಅಂತೆಯೇ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂತ್ರಿ ಬೆನ್ ಜಿವಿರ್ ಅವರನ್ನು ಹೆಸರಿನಿಂದ ಟೀಕಿಸಿದ ಬೈಡನ್, “ಇದು ಇಸ್ರೇಲ್‌ನ ಇತಿಹಾಸದಲ್ಲಿ ಅತ್ಯಂತ ಸಂಪ್ರದಾಯವಾದಿ ಸರ್ಕಾರವಾಗಿದೆ. ದಶಕಗಳಿಂದ ಇಸ್ರೇಲಿ ನಾಯಕರನ್ನು ತಿಳಿದಿದ್ದೇವೆ. ಬೆನ್ ಜಿವಿರ್ ಮತ್ತು ಕಂಪನಿ ಮತ್ತು ಹೊಸ ಜನರು ದೂರದಿಂದಲೇ ಎರಡು-ರಾಷ್ಟ್ರ ಪರಿಹಾರವನ್ನು ಸಮೀಪಿಸುವುದನ್ನು ಬಯಸುವುದಿಲ್ಲ” ಎಂದು ವಿಷಾದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap