ತುಮಕೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ಭವ್ಯ ಸ್ವಾಗತ ಸ್ವಾಗತ ಕೋರಿದ್ದಾರೆ. ತುಮಕೂರು ವಿವಿ ಆವರಣದ ಹೆಲಿಪ್ಯಾಡ್ಗೆ ಅಮಿತ್ ಶಾ ಬಂದಿಳಿಯುತ್ತಿದ್ದಂತೆ ಹೆಲಿಪ್ಯಾಡ್ನಿಂದ ಮಠದವರೆಗೂ ಅಮಿತ್ ಶಾ ಅವರ ಕಾರಿನ ಮೇಲೆ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿದರು.
ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ
ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸುರುವ ‘ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮವನ್ನು ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಅಮಿತ್ ಶಾ ಜತೆ ಪ್ರಹ್ಲಾದ್ ಜೋಶಿ ಕೂಡ ಆಗಮಿಸಿದ್ದಾರೆ.
ಅಮಿತ್ ಶಾ ಅವರ ಸ್ವಾಗತಕ್ಕೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ವಿಶ್ವವಿದ್ಯಾಲಯದ ಮುಂಭಾಗ ಕಹಳೆ, ವೀರಗಾಸೆ, ಡೊಳ್ಳುಕುಣಿತ, ಡ್ರಮ್ ಸೆಟ್ ಕಲಾವಿದರು ಅಮಿತ್ ಶಾ ಅವರನ್ನ ಅದ್ದೂರಿಯಾಗಿ ಸ್ವಾಗತಿಸಿದರು. ರೋಡ್ ಶೋ ಮೂಲಕ ಶ್ರೀಮಠಕ್ಕೆ ಅಮಿತ್ ಶಾ ಆಗಮಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ