ಕೊರೋನಾ ಸೋಂಕು : ಆಸ್ಪತ್ರೆಯಿಂದಲೇ ಅಮಿತಾಬ್ ಬಚ್ಚನ್​ ಟ್ವೀಟ್!!

ಮುಂಬೈ : 

Amitabh Bachchan, Abhishek Bachchan test positive for COVID-19 ...

     ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಜೋರಾಗಿದ್ದು,ಇದರ ಮಧ್ಯೆ ಬಾಲಿವುಡ್​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ ಹಾಗೂ ಅವರ ಮಗ ಅಭಿಷೇಕ್​ ಬಚ್ಚನ್​ಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

      ಅನಾರೋಗ್ಯದ ಕಾರಣ ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿದಾಗ ಅಮಿತಾಬ್​ ಬಚ್ಚನ್​ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರು ಟ್ವೀಟ್​ ಮಾಡಿ ಮಾಹಿತಿ ಹೊರಹಾಕಿದ್ದಾರೆ. 

      ನನಗೆ ಕೋವಿಡ್​-19 ಪಾಸಿಟಿವ್​ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗಕ್ಕೂ ಪರೀಕ್ಷೆ ನಡೆಸಲಾಗುತ್ತಿದ್ದು, ಅದರ ಫಲಿತಾಂಶ ಬರಬೇಕಾಗಿದೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ.

      ಇನ್ನು ತಮಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನ ಅಭಿಷೇಕ್​ ಬಚ್ಚನ್​ ಕೂಡ ಟ್ವೀಟ್​ ಮೂಲಕ ಹೊರಹಾಕಿದ್ದು, ಇಂದು ಬೆಳಗ್ಗೆ ನನಗೆ ಹಾಗೂ ತಂದೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಸೋಂಕಿನ ಲಕ್ಷಣ ಕಾಣಿಸಿಕೊಂಡಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇವೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಮ್ಮ ಕುಟುಂಬ ಹಾಗೂ ಮನೆಯಲ್ಲಿರುವ ಸಿಬ್ಬಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

      ಅಮಿತಾಭ್​​ ಬಚ್ಚನ್ ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಕೂಡಾ ಕೊರೊನಾ ತಪಾಸಣೆಗೆ ಒಳಗಾಗಿದ್ದರು. ಇದೀಗ ಅವರ ತಪಾಸಣಾ ವರದಿ ನೆಗೆಟಿವ್ ಬಂದಿದೆ. ಇನ್ನು ಬಿಗ್‌ ಬಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಬೇಗ ಗುಣಮುಖರಾಗುವಂತೆ ಬಾಲಿವುಡ್ ನಟ ನಟಿಯರು ಹಾರೈಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap