ಅಮಿತ್ ಷಾ ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು

        ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು, ಮೋದಿ ಮತ್ತು ಗೃಹ ಸಚಿವ ಅಮಿತ್ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

     ತಾವು ಅಧಿಕಾರ ನಡೆಸಲು ಅಸಮರ್ಥರು ಎಂಬುದನ್ನು ರಾಜ್ಯ ಸರ್ಕಾರದ ಈ ದಾಖಲೆಗಳು ಸಾರುತ್ತಿದ್ದು, ರಾಜ್ಯದ ಪರವಾಗಿ ಹೋರಾಟ ನಡೆಸದ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರುಗಳು ತಾವು ಯಾವ ರೀತಿಯಲ್ಲೂ ಕೆಲಸಕ್ಕೆ ಬಾರದವರು ಎಂಬುದನ್ನೂ ನಿರೂಪಿಸಿದ್ದಾರೆ ಎಂದರು.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರ 2022-23 ರಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದನ್ನು ಸಾಧಿಸಲು ಇದ್ದ ಅವಕಾಶ ಇದೇ ಮಾರ್ಚ್ 31 ಕ್ಕೆ ಮುಗಿಯಿತು. ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಸೇರಿ ಅನುಷ್ಠಾನ ಮಾಡುವ ಕೇಂದ್ರ ಪುರಸ್ಕöÈತ ಯೋಜನೆಗಳನ್ನು ಡಬಲ್ ಎಂಜಿನ್ ಸರ್ಕಾರ ದಯನೀಯವಾಗಿ ಮಣ್ಣುಪಾಲು ಮಾಡಿದೆ ಎಂದು ಹೇಳಿದ್ದಾರೆ.

    ಮಾರ್ಚ್ 31 ರವರೆಗೆ ಬಿಡುಗಡೆ ಮಾಡಿ ಖರ್ಚು ಮಾಡಿರುವ ಕೇಂದ್ರ ಪುರಸ್ಕöÈತ ಯೋಜನೆಗಳ ಅನುದಾನ ಕುರಿತ ದಾಖಲೆಗಳೇ ಸತ್ಯ ಹೇಳುತ್ತಿವೆ. ಎರಡೂ ಸರ್ಕಾರಗಳು ಕೇಂದ್ರ ಪುರಸ್ಕöÈತ ಯೋಜನೆಗಳಿಗಾಗಿ ಖರ್ಚುಮಾಡುತ್ತೇವೆ ಎಂದು ಹೇಳಿದ್ದ ಮೊತ್ತ 47557 ಕೋಟಿ ರೂ, ಇದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9041 ಕೋಟಿ ರೂಗಳು ಸೇರಿವೆ. ಇದರಲ್ಲಿ ಮಾರ್ಚ್ 31 ರ ಅಂತ್ಯಕ್ಕೆ ಖರ್ಚು ಮಾಡಿದ್ದ ಮೊತ್ತ 23735 ಕೋಟಿ ರೂ ಮಾತ್ರ. ಹಾಗಾಗಿ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಶೇ.49.9 ರಷ್ಟು ಮಾತ್ರ.

    ಕಳೆದ ಬಜೆಟ್‌ನಲ್ಲಿ ರಾಜ್ಯಕ್ಕೆ 21435 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಮಾರ್ಚ್ 31 ಕ್ಕೆ ಬಿಡುಗಡೆ ಮಾಡಿದ ಒಟ್ಟು ಮೊತ್ತ 13339 ಕೋಟಿ.ರೂ ಮಾತ್ರ. ನಿಮ್ಮ ಈ ಅವಮಾನ ಮತ್ತು ದ್ರೋಹವನ್ನು ಕರ್ನಾಟಕದ ಜನ ಯಾಕೆ ಸಹಿಸಬೇಕು? 4.75 ಲಕ್ಷ ಕೋಟಿ ರೂಗಳಿಗೂ ಹೆಚ್ಚು ತೆರಿಗೆ ಮತ್ತು ಸುಂಕಗಳನ್ನು ನಮ್ಮ ರಾಜ್ಯದ ಜನರಿಂದ ಲೂಟಿ ಹೊಡೆಯುವ ನೀವು ನಮಗೆ ವಾಪಸ್ಸು ಕೊಡುತ್ತಿರುವುದು ಬರೀ ಭಾಷಣ ಮತ್ತು ಸುಳ್ಳು ಜಾಹಿರಾತುಗಳು ಮಾತ್ರ ಎಂದಿದ್ದಾರೆ.

     ಮನಮೋಹನಸಿಂಗ್ ಸರ್ಕಾರ ಕೇಂದ್ರ ಪುರಸ್ಕತ ಯೋಜನೆಗಳಿಗೆ ಶೇ.75 ರಷ್ಟು ಅನುದಾನವನ್ನು ಕೊಡುತ್ತಿತ್ತು. ರಾಜ್ಯ ಸರ್ಕಾರ ಶೇ.25 ರಷ್ಟು ಮ್ಯಾಚಿಂಗ್ ಗ್ರಾ÷್ಯಂಟ್ ನೀಡುತ್ತಿತ್ತು. ಮೋದಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ಕೊಡುತ್ತಿದೆ. ದುಡ್ಡು ರಾಜ್ಯದ ಜನರದ್ದು ಹೆಸರು ಮಾತ್ರ ಮೋದಿ ಸರ್ಕಾರದ್ದು. ಇದಕ್ಕಿಂತ ಬೇರೆ ಮೋಸ ಯಾವುದಾದರೂ ಇದೆಯೆ? ಎಂದು ಪ್ರಶ್ನಿಸಿದ್ದಾರೆ.

      ಕೇಂದ್ರ ಪುರಸ್ಕತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಜವಾಬ್ಧಾರಿ ಹೊತ್ತಿರುವ ಕೇಂದ್ರ ಸಚಿವರುಗಳು ನಮ್ಮ ರಾಜ್ಯದವರೂ ಇಬ್ಬರಿದ್ದಾರೆ. ಒಬ್ಬರು ಸಮಾಜ ಕಲ್ಯಾಣ ಇಲಾಖೆಯನ್ನು ನಿಭಾಯಿಸುವ ಎ.ನಾರಾಯಣಸ್ವಾಮಿ ಮತ್ತು ಕೃಷಿ ಇಲಾಖೆಯನ್ನು ನೋಡಿಕೊಳ್ಳುವ ಶೋಭಾಕರಂದ್ಲಾಜೆ. ಈ ಇಬ್ಬರ ಇಲಾಖೆಗಳಲ್ಲೂ ಗಣನೀಯ ಸಾಧನೆಯಾಗಿಲ್ಲ. ಕೇಂದ್ರ ಸರ್ಕಾರ 2022-23 ಕ್ಕೆ ಸಂಬAಧಿಸಿದAತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ ರೂ.597 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಮಾರ್ಚ್ 2023 ರ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ ರೂ.121 ಕೋಟಿ ಮಾತ್ರ. ಅದರಲ್ಲಿ ಪ್ರಧಾನ ಮಂತ್ರಿ ಅಭ್ಯುದಯ ಯೋಜನೆಗೆ (ಪಿ.ಎಂ.ಅಜಯ್) ರೂ.200 ಕೋಟಿ ಬಿಡುಗಡೆ ಮಾಡುವ ಭರವಸೆಯನ್ನೇ ಈಡೇರಿಸಿಲ್ಲ.

      ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕಾಗಿ ರೂ.121 ಕೋಟಿ ಬಿಡುಗಡೆ ಪೈಕಿ ಕೇವಲ ರೂ.49 ಕೋಟಿ ಮಾತ್ರ ನೀಡಿದೆ. ಪರಿಶಿಷ್ಟ ಪಂಗಡದ ಪೂರ್ವ ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.16 ಕೋಟಿ ಬಿಡುಗಡೆ ಮಾಡುತ್ತೇವೆ ಎಂದಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಅಸ್ಪಶ್ಯತೆ ನಿವಾರಣೆಗಾಗಿ ರೂ.35 ಕೋಟಿ ಬಿಡುಗಡೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಬಿಡುಗಡೆ ಮಾಡಿದ್ದು ರೂ.8.75 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.32 ರಷ್ಟು ಪ್ರಗತಿಯಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ರೂ.19.25 ಕೋಟಿ ರೂ ಪೈಕಿ ಬಿಡುಗಡೆ ಮಾಡಿದ್ದು 9.38 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.13 ರಷ್ಟು ಪ್ರಗತಿಯಾಗಿದೆ. ಕೃಷಿ ಇಲಾಖೆಯಲ್ಲಿ ರೂ.613 ಕೋಟಿ ರೂ ಪೈಕಿ ರೂ.426 ಕೋಟಿ. ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರೂ.105 ಕೋಟಿ ರೂನಲ್ಲಿ ರೂ.73 ಕೋಟಿ, ಮಾತಿನಲ್ಲಿ ಮಾತ್ರ ಮೀನುಗಾರರು ಮತ್ತು ಪಶು ಸಂಗೋಪನೆ ಬಗ್ಗೆ ಮಂತ್ರದಲ್ಲೇ ಮಾವಿನಕಾಯಿ ಉದುರಿಸುತ್ತಿದೆ. ಕೌಶಲ್ಯಾಭಿವೃದ್ಧಿ ಇಲಾಖೆಗೆ ರೂ.472 ರೂ ಪೈಕಿ ರೂ.227 ಕೋಟಿ, ಅರಣ್ಯ ಮತ್ತು ಪರಿಸರ ಇಲಾಖೆಗೆ ರೂ.80 ಕೋಟಿ ರೂನಲ್ಲಿ 25 ಕೋಟಿ ರೂ ಮಾತ್ರ ನೀಡಿದ್ದಾರೆ.

    ಆದರೆ ಇದೆ ಏಪ್ರಿಲ್-9 ರಂದು ಬಂಡೀಪುರದ ಸಫಾರಿಗೆ ಬರುತ್ತೇನೆಂದು ಪ್ರಧಾನಿ ಹೇಳಿದ್ದಾರೆ. ಬಂಡೀಪುರದ ಅರಣ್ಯವನ್ನು ಅದಾನಿ-ಅಂಬಾನಿಗಳಿಗೆ ಕೊಡದಿದ್ದರೆ ಸಾಕು. ಆನೆ, ಚಿರತೆಗಳ ಬಗ್ಗೆ ಮತ್ತು ಮರಗಳ ಬಗ್ಗೆ ಕಾಳಜಿ ತೋರಿಸುವ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಸ್ಯಾಂಕಿ ಕೆರೆ ಮೇಲಿನ ಮರಗಳನ್ನು ಕಡಿಯಬಾರದೆಂದು ಪ್ರತಿಭಟನೆ ಮಾಡಿದ್ದ ಪರಿಸರವಾದಿಗಳ ಮೇಲೆ ಕ್ರಿಮಿನಲ್ ಕೇಸ್‌ಗಳನ್ನು ದಾಖಲಿಸಿದ್ದಾರೆ. ಇದನ್ನೆ ನಾನು ಹೇಳುವುದು ಬಿಜೆಪಿ ಸರ್ಕಾರ ಮಾಡುವುದೊಂದು, ಹೇಳುವುದೊಂದು.

    ಆರೋಗ್ಯ ಇಲಾಖೆಗೆ ರೂ.2169 ಕೋಟಿ ರೂ ನಲ್ಲಿ 699 ಕೋಟಿ ರೂ, ಅಲ್ಪಸಂಖ್ಯಾತರ ಇಲಾಖೆಗೆ ರೂ.300 ಕೋಟಿ ರೂ ಪೈಕಿ 75 ಕೋಟಿ ರೂ ಮಾತ್ರ ನೀಡಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ರೂ.9217 ಕೋಟಿ ರೂ ನಲ್ಲಿ 4709 ಕೋಟಿ ರೂ, ನಗರಾಭಿವೃದ್ಧಿ ಇಲಾಖೆಗೆ ರೂ.1710.55 ಕೋಟಿ ರೂನಲ್ಲಿ 692 ಕೋಟಿ ರೂ, ಮಾತ್ರ ನೀಡಿದೆ.

    ಬೆಂಗಳೂರು ಒಂದರಿಂದಲೇ ರೂ.10 ಲಕ್ಷ ಕೋಟಿಗೂ ಹೆಚ್ಚು ರಪ್ತು  ಮಾಡುವ ಕೇಂದ್ರ ಸರ್ಕಾರ ತನ್ನ ತೆರಿಗೆಯಲ್ಲಿ ಗಣನೀಯ ಸಂಪತ್ತನ್ನು ಬೆಂಗಳೂರಿನಿಂದ ದೋಚಿಕೊಳ್ಳುವ ಮೋದಿ ಸರ್ಕಾರ ನಗರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದೆ ಬೆಂಗಳೂರಿಗರನ್ನು ಮತ್ತು ನಗರಗಳ ಪ್ರಜೆಗಳನ್ನು ಕೇವಲ ಮತ ಹಾಕುವ ಯಂತ್ರಗಳಂತೆ ಭಾವಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap