ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಅಮ್ಮಸಂದ್ರ ಸುರೇಶ್ ಆಯ್ಕೆ

ತರುವೇಕೆರೆ

    ತಾಲ್ಲೂಕಿನ ಅಮ್ಮಸಂದ್ರ ಮೂಲದ ಲೇಖಕ, ಅಂಕಣಕಾರ ಮತ್ತು ಮಾಧ್ಯಮ ವಿಶ್ಲೇಷಕ ಡಾ.ಅಮ್ಮಸಂದ್ರ ಸುರೇಶ್ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

   ಸಮ್ಮೇಳನವು ಇದೇ ತಿಂಗಳು 15ರಂದು ಹೆಗ್ಗಡದೇವನಕೋಟೆ ತಾಲ್ಲೂಕಿನ ಹೋಬಳಿ ಕೇಂದ್ರವಾದ ಅಂತರಸಂತೆಯಲ್ಲಿ ನಡೆಯಲಿದೆ. ಡಾ.ಅಮ್ಮಸಂದ್ರ ಸುರೇಶ್ ರಾಜ್ಯದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಮತ್ತು ಅಂಕಣಗಳನ್ನು ಬರೆಯುತ್ತಿದ್ದಾರೆ.

   ಮಹಾನಾಯಕನ ಮಹಾಕೊಡುಗೆಗಳು, ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ, ಧೀಮಂತ ಪತ್ರರ‍್ತ ಅಂಬೇಡ್ಕರ್, ಅಭಿವೃದ್ಧಿ ಸಂವಹನ, ಅಸಮಾನತೆಯ ಉದಾರೀಕರಣ, ಕನ್ನಡ ಪತ್ರಿಕೋದ್ಯಮದ ತೇರನೆಳೆದವರು, ನೆಲೆ ಇಲ್ಲದವರು ಸೇರಿದಂತೆ 13 ಕೃತಿಗಳನ್ನು ರಚಿಸಿದ್ದಾರೆ. ರ‍್ನಾಟಕ ರಾಜ್ಯ ಹಿಂದುಳಿದ ರ‍್ಗಗಳ ಜಾಗೃತಿ ವೇದಿಕೆ ಕೊಡ ಮಾಡುವ 2022ರ “ವಿಶ್ವಮಾನವ” ಪ್ರಶಸ್ತಿ. ರ‍್ನಾಟಕ ಹೊಯ್ಸಳ ಸಂಘ ಮತ್ತು ಸವಿಗನ್ನಡ ಪತ್ರಿಕೆಗಳು ಕೊಡಮಾಡುವ “ಹೊಯ್ಸಳ ಪ್ರಶಸ್ತಿ” ರ‍್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡ ಮಾಡುವ “ಸೇವಾ ಭೂಷಣ” ಮತ್ತು “ಕರುನಾಡ ರತ್ನ” ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

    ತುರುವೇಕೆರೆ ನಾಗರಿಕರ ವೇದಿಕೆ, ತಾಲ್ಲೂಕು ಪತ್ರರ‍್ತರ ಸಂಘ, ಲಯನ್ಸ್ ಕ್ಲಬ್, ತಾಲ್ಲೂಕು ರ‍್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು, ಸಾಹಿತಿಗಳಾದ ಪುಟ್ಟರಂಗಪ್ಪ, ದಂಡಿನಶಿವರ ತಿಮ್ಮೇಗೌಡ ಸೇರಿದಂತೆ ಹಲವರು ಅಮ್ಮಸಂದ್ರ ಸುರೇಶ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link