ಇಂದಿನಿಂದ ಅಂಗನವಾಡಿ ನೌಕರರ ಪ್ರತಿಭಟನೆ ….!

ಬೆಂಗಳೂರು :

     ಎಐಟಿಯುಸಿ ಜಯಮ್ಮ ನೇತೃತ್ವದಲ್ಲಿ ಫ್ರೀಡಂಪಾರ್ಕ್​ನಲ್ಲಿ ಅನಿರ್ಧಷ್ಟಾವಧಿವರೆಗೆ ಪ್ರತಿಭಟನೆ ಮಾಡಲಿದ್ದಾರೆ.ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು   ಇಂದಿನಿಂದ ಪ್ರತಿಭಟನೆ ಮಾಡಲಿದ್ದಾರೆ . ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಆಫ್ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುಬೇಕೆಂದು ಬೇಡಿಕೆ ಇಟ್ಟಿದ್ದಾರೆ.   

   ಬೆಂಗಳೂರಿನ 2877 ಅಂಗನವಾಡಿ ಕೇಂದ್ರಗಳಲ್ಲಿ 430 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಮತ್ತು 1198 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಕಳೆದ 3-4 ವರ್ಷದಿಂದ ನೌಕರರನ್ನ ನೇಮಕ ಮಾಡಿಲ್ಲ. ಕಳೆದ ಮಾರ್ಚ್ 5 ರಂದು ಭೌತಿಕ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಸಾಕಷ್ಟು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

   ಅರ್ಜಿ ಸಲ್ಲಿಸಿ 8 ತಿಂಗಳು ಕಳೆದರು ಇಲಾಖೆಯ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಬೇಡಿಕೆ ಪೂರೈಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap