ಈ ಸುದ್ದಿಯ ನಂತರ ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ತೀವ್ರವಾಗಿ ಕುಸಿತ ಕಂಡಿವೆ. ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಮಾರುಕಟ್ಟೆಯ ಮುಕ್ತಾಯಕ್ಕೆ 10 ನಿಮಿಷಗಳ ಮೊದಲು ಶೇಕಡಾ 3 ರಷ್ಟು ಕುಸಿದು 1,584 ರೂ ಇತ್ತು. ಆದರೆ, ವಹಿವಾಟಿನ ವೇಳೆ ಕಂಪನಿಯ ಷೇರುಗಳು ಶೇಕಡಾ ಮೂರೂವರೆ ಕುಸಿದು 1575.75 ರೂಗೆ ತಲುಪಿತ್ತು ಆದರೆ ಒಂದು ದಿನದ ಹಿಂದೆ ಕಂಪನಿಯ ಷೇರುಗಳು 1634.05 ರಲ್ಲಿ ಮುಕ್ತಾಯಗೊಂಡಿದ್ದವು.
ಕಂಪನಿಯ ಷೇರುಗಳ ಕುಸಿತದಿಂದಾಗಿ, ಕಂಪನಿಯ ತನ್ನ ವ್ಯಾಲ್ಯುವೇಷನ್ನಲ್ಲಿ 7200 ಕೋಟಿ ರೂ.ಗಿಂತ ಹೆಚ್ಚು ಕಳೆದುಕೊಂಡಿದೆ. ಮಹೀಂದ್ರಾಗೆ ಭಾರಿ ನಷ್ಟವನ್ನು ಉಂಟುಮಾಡಿದೆ. ಮಾಹಿತಿಯ ಪ್ರಕಾರ, ಒಂದು ದಿನದ ಹಿಂದೆ ಕಂಪನಿಯ ಷೇರಿನ ಬೆಲೆ ರೂ.1634.05 ಆಗಿತ್ತು. ಅಲ್ಲದೆ ಕಂಪನಿಯ ಮಾರುಕಟ್ಟೆ ಮೌಲ್ಯ 2,03,025.78 ಕೋಟಿ ರೂ ಇತ್ತು. ಇಂದು ಷೇರಿನ ಬೆಲೆ 1575.75 ರೂ.ಗೆ ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯವು 1,95,782.18 ಕೋಟಿ ರೂ.ಗೆ ತಲುಪಿದೆ. ಅಂದರೆ ಕಂಪನಿಯ ಮೌಲ್ಯಮಾಪನವು ಒಂದು ದಿನಕ್ಕೆ 7,243.6 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ.
ಕಳೆದ ಕೆಲವು ದಿನಗಳಿಂದ ಕೆನಡಾ ಮತ್ತು ಭಾರತದ ನಡುವೆ ವಿವಾದ ಹೆಚ್ಚಾಗುತ್ತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಈಗ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ.