ಶಿರಸಿ:
ತಂದೆ ಮುಸಲ್ಮಾನ, ತಾಯಿ ಕ್ರಿಶ್ಚಿಯನ್ ಆದ್ರೆ ಮಗ ಮಾತ್ರ ಹೇಗೆ ಬ್ರಾಹ್ಮಣನಾಗಲು ಸಾಧ್ಯ ಎಂದು ರಾಹುಲ್ ಗಾಂಧಿ ಅವರ ಬ್ರಾಹ್ಮಣ ಹೇಳಿಕೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಟೀಕಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದನಗನಹಳ್ಳಿಯಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಬ್ರಾಹ್ಮಣ ಹೇಳಿಕೆಗೆ ಪ್ರತಿಕ್ರಿಯಿಸಿ ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ ಆದ್ರೆ ಮಗ ಹೇಗೆ ಬ್ರಾಹ್ಮಣ ಆಗಲು ಸಾಧ್ಯ? ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ ಕಾಂಗ್ರೆಸ್ ಲ್ಯಾಬ್‍ನಲ್ಲಿ ಮಾತ್ರ ಇದೆ. ರಾಹುಲ್ ಗಾಂಧಿ ಸುಳ್ಳು ಹೇಳಿದರೂ ನಂಬುವಂತಹ ಸುಳ್ಳು ಹೇಳಬೇಕು ಎಂದು ಟೀಕಿಸಿದ್ದಾರೆ.
ರಫೇಲ್ ವಿಚಾರ ಹಿಡಿದುಕೊಂಡು ಬಿಜೆಪಿ ವಿರುದ್ಧ ಮಾತನಾಡುತ್ತಿರುವ ರಾಹುಲ್ ಗಾಂಧಿಗೆ ರಫೇಲ್ ಪದದ ಅರ್ಥ ಗೊತ್ತಿಲ್ಲ. ಅದರಲ್ಲಿ ಎಷ್ಟು ಅಕ್ಷರ ಇದೆ ಎಂದು ತಿಳಿದಿಲ್ಲ. ಅವರು ರಫೇಲ್ ಅಂದರೆ ಮೂರು ಚಕ್ರದ ಸೈಕಲ್ ಎಂದು ತಿಳಿದುಕೊಂಡಿದ್ದಾರೆ. ಎಂದೂ ಲೇವಡಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ