ಆಂಧ್ರ ಡಿಸೆಂ ಜೊತೆ ನಾನು ಡ್ಯಾನ್ಸ್‌ ಮಾಡಲಿದ್ದೇನೆ : ಅನಸೂಯ

ಆಂಧ್ರ

    ಡಿಸಿಎಂ ಪವನ್ ಕಲ್ಯಾಣ್  ರಾಜಕೀಯವಾಗಿ ಈಗ ಸಖತ್ ಬ್ಯೂಸಿಯಾಗಿದ್ದಾರೆ. ಇದರ ಮಧ್ಯೆಯೂ ಅವರು ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಬ್ಯೂಟಿಯೊಂದಿಗೆ ಹೆಜ್ಜೆ ಹಾಕಲಿದ್ದಾರೆ.ಈಗ ಪವನ್ ಕಲ್ಯಾಣ್ ಜೊತೆ ನಟಿ ಅನಸೂಯ  ಸೊಂಟ ಬಳುಕಿಸಲಿದ್ದಾರೆ.

    ವೇದಿಕೆಯೊಂದರಲ್ಲಿ ‘ಪುಷ್ಪ’ ನಟಿ ಅನಸೂಯ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಈ ವಿಚಾರ ರಿವೀಲ್ ಮಾಡುತ್ತಿದ್ದೇನೆ. ನಾನು ಪವನ್ ಸರ್ ಜೊತೆ ಡ್ಯಾನ್ಸ್ ಮಾಡಲಿದ್ದೇನೆ. ಈ ಸಾಂಗ್ ಬಿಗ್ ಸ್ಕ್ರಿನ್‌ನಲ್ಲಿ ಅಬ್ಬರಿಸಲಿದೆ ಎಂದು ಸಂತಹಸದಿಂದ ಹೇಳಿಕೊಂಡಿದ್ದಾರೆ.

    ಆದರೆ, ಅವರು ಹೆಜ್ಜೆ ಹಾಕುವುದು ಯಾವ ಸಿನಿಮಾದಲ್ಲಿ ಎಂಬುವುದನ್ನು ಮಾತ್ರ ಹೇಳಿಲ್ಲ. ಉಸ್ತಾದ್ ಭಗತ್ ಸಿಂಗ್’, ‘ಒಜಿ’, `ಹರಿ ಹರ ವೀರ ಮಲ್ಲು’ ಸಿನಿಮಾಗಳು ಪವನ್ ಕೈಯಲ್ಲಿವೆ. ಈ ಪ್ರಾಜೆಕ್ಟ್‌ಗಳಲ್ಲಿ ಯಾವುದು ಅನಸೂಯ ಹೇಳ್ತಿರುವ ಚಿತ್ರ ಎಂಬುದನ್ನು ಕಾದುನೋಡಬೇಕಿದೆ.

Recent Articles

spot_img

Related Stories

Share via
Copy link
Powered by Social Snap