ಅಮರಾವತಿ:
ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೆಡಿ ವಾನ್ಸ್ ಅವರ ಪತ್ನಿ ಉಷಾ ವಾನ್ಸ್ ಅವರನ್ನು ಮುಖ್ಯಮಂತ್ರಿ ಚಂದ್ರಬಾಬು ಅಭಿನಂದಿಸಿದ್ದು, ಇದು ‘ತೆಲುಗು ಭಾಷಿಕರಿಗೆ ಹೆಮ್ಮೆಯ ಕ್ಷಣ’ ಎಂದು ಶ್ಲಾಘಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, ‘ಅಮೆರಿಕದಲ್ಲಿ ತೆಲುಗು ಮೂಲ ಹೊಂದಿರುವ ಉಷಾ ವಾನ್ಸ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇದು ಜಗತ್ತಿನ ಎಲ್ಲಾ ತೆಲುಗು ಜನರಿಗೆ ಹೆಮ್ಮೆಯ ವಿಷಯವಾಗಿದೆ. ಅವರನ್ನು ಆಂಧ್ರ ಪ್ರದೇಶಕ್ಕೆ ಆಹ್ವಾನಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಡೊನಾಲ್ಡ್ ಟ್ರಂಪ್ ಅವರನ್ನೂ ಕೂಡ ಚಂದ್ರಬಾಬು ನಾಯ್ಡು ಅಭಿನಂಧಿಸಿದರು. 38 ವರ್ಷದ ಉಷಾ ಅಮೆರಿಕದ ಎರಡನೇ ಮಹಿಳೆಯಾಗಲಿದ್ದಾರೆ. ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವ್ಯಾನ್ಸ್ ಪತ್ನಿ ಉಷಾ ವಾನ್ಸ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ.
ಆಂಧ್ರಪ್ರದೇಶದಲ್ಲಿ ಬೇರೂರಿರುವ ಉಷಾ ವಾನ್ಸ್ ಅವರು ಅಮೆರಿಕದ ಎರಡನೇ ಕಮಾಂಡ್ ಆಗಿ ಸೇವೆ ಸಲ್ಲಿಸಿದ ಮೊದಲ ತೆಲುಗು ಮಹಿಳೆಯಾಗಿದ್ದಾರೆ ಮತ್ತು ಅವರ ಗೆಲುವು ಐತಿಹಾಸಿಕ ಕ್ಷಣವಾಗಿದೆ ಎಂದು ಚಂದ್ರಬಾಬು ನಾಯ್ಡು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಾದ್ಯಂತ ತೆಲುಗು ಸಮುದಾಯಕ್ಕೆ ಇದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ ಚಂದ್ರಬಾಬು, ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ಅವರನ್ನು (ಜೆಡಿ ವಾನ್ಸ್ ಮತ್ತು ಉಷಾ) ಆಹ್ವಾನಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.