ಚೆನ್ನೈ:
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸೂಪರ್ ಡೂಪರ್ ಹಿಟ್ ಆಗಿದೆ. ಆನ್ಲೈನ್ ನಲ್ಲಿ ಈ ಚಿತ್ರದ ಎಚ್ ಡಿ ಪ್ರಿಂಟ್ ಲೀಕ್ ಆಗಿದ್ದರೂ ಸಹ ‘ತಲೈವಾ’ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ನೆಚ್ಚಿನ ನಟನೆ ಚಿತ್ರ ವೀಕ್ಷಿಸಲು ಮುಗಿ ಬೀಳುತ್ತಿದ್ದು, ಜೈಲರ್ ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ.
ಚಿತ್ರದ ಭರ್ಜರಿ ಯಶಸ್ಸಿನಿಂದ ಸಂತಸಗೊಂಡಿರುವ ನಿರ್ಮಾಪಕ ಕಲಾನಿಧಿ ಮಾರನ್, ಈಗಾಗಲೇ ರಜನಿಕಾಂತ್ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿದ್ದು, ಜೊತೆಗೆ ಬಿಎಂಡಬ್ಲ್ಯೂ ಕಾರ್ ಗಿಫ್ಟ್ ಮಾಡಿದ್ದಾರೆ. ಅಲ್ಲದೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಸಹ ದೊಡ್ಡ ಸಂಭಾವನೆಯೊಂದಿಗೆ ಪೋರ್ಷೆ ಕಾರು ನೀಡಿದ್ದಾರೆ.
To celebrate the humongous Blockbuster #Jailer, Mr. Kalanithi Maran presented the key of a brand new Porsche car to @anirudhofficial#JailerSuccessCelebrations pic.twitter.com/lbkiRrqv7B
— Sun Pictures (@sunpictures) September 4, 2023
ಇದೀಗ ಜೈಲರ್ ಚಿತ್ರದ ಸಂಗೀತ ನಿರ್ದೇಶಕ ಹಾಗೂ ಈ ಚಿತ್ರದ ಹುಕುಂ ಸಾಂಗ್ ಮೂಲಕವೇ ತಲೈವಾ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿರುವ ಅನಿರುದ್ಧ್ ರವಿಚಂದ್ರನ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಸೆಪ್ಟೆಂಬರ್ 4ರಂದು ಐಶಾರಾಮಿ ಪೋರ್ಷೆ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅನಿರುದ್ಧ್ ಕಚೇರಿಗೆ ಪೋರ್ಷೆ, ಬಿಎಂಡಬ್ಲ್ಯೂ ಸೇರಿದಂತೆ ಹೊಚ್ಚಹೊಸ ಮೂರು ಕಾರುಗಳೊಂದಿಗೆ ತೆರಳಿದ್ದ ಕಲಾನಿಧಿ ಮಾರನ್ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ ಎಂದಾಗ ಅನಿರುದ್ಧ್ ಪೋರ್ಷೆ ಕಾರು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
