ಹಂಸಲೇಖ ನಾಡಿನ ನಿಜವಾದ ಆಸ್ತಿ : ಎಚ್.ಆಂಜನೇಯ

 ಬೆಂಗಳೂರು:

    ನಾದಬ್ರಹ್ಮ ಎಂಬ ಗೌರವಕ್ಕೆ ಪಾತ್ರರಾಗಿರುವ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಅವರು ಸಾಮಾಜಿಕ ಪಿಡುಗು ಭ್ರೂಣ ಹತ್ಯೆ ವಿರುದ್ಧ ಹೋರಾಟಕ್ಕೆ ಚಲನಚಿತ್ರದ ಮೂಲಕ ಮುಂದಾಗುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಮಾಜಿ ಸಚಿವ
ಹೆಚ್.ಆಂಜನೇಯ ತಿಳಿಸಿದರು.

   ಸಾಮಾಜಿಕ ಪಿಡುಗು ಆಗಿರುವ ಭ್ರೂಣಹತ್ಯೆ ಕತೆಯನ್ನಾಧರಿಸಿರುವ ಒಕೆ ಚಲನಚಿತ್ರ ಚಿತ್ರೀಕರಣಕ್ಕೆ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಬಳಿಕ, ಹಂಸಲೇಖ ಅವರನ್ನು ಆಂಜನೇಯ ಸನ್ಮಾನಿಸಿ ಮಾತನಾಡಿದರು.

   ನಾಡು ಕಂಡ ಅಪರೂಪದ ಸಂಗೀತಗಾರ, ಸಂಗೀತ ನಿರ್ದೇಶಕ, ಸಾವಿರಾರು ಯುವಕರನ್ನು ಬೆಳೆಸಿರುವ ಹಂಸಲೇಖ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭ ಚಿತ್ರನಿರ್ದೇಶಕರಾಗಿ ಬಡ್ತಿ ಹೊಂದುತ್ತಿರುವುದು ಸಂತಸದ ವಿಷಯ ಎಂದರು.
ನೊಂದ ಜನರ ಪರ, ಪ್ರೀತಿ-ಪ್ರೇಮ-ಮಾತೃತ್ವ ಹೀಗೆ ಪ್ರಕೃತಿ ನೀಡಿರುವ ಕೊಡುಗೆಗಳನ್ನು ಹೆಚ್ಚು ಪ್ರೀತಿಸುವ ಜೊತೆಗೆ ಅವುಗಳ ಮೇಲೆ ಹಾಡುಗಳನ್ನು ರಚಿಸಿ, ಸಂಗೀತ ನಿರ್ದೇಶನ ಮಾಡಿ ನಾಡಿನ ಜನರ ಮನಗೆದ್ದಿರುವ ಹಂಸಲೇಖ ಸಾಮಾಜಿಕ ಪಿಡುಗೆ ಭ್ರೂಣಹತ್ಯೆ ವಿರುದ್ಧ
ಚಲನಚಿತ್ರದ ಮೂಲಕ ಹೋರಾಟ ಕೈಗೊಂಡಿರುವುದು ನಮ್ಮೆಲ್ಲರಿಗೂ ಆದರ್ಶ ಎಂದು ಹೇಳಿದರು.

   ಎಲ್ಲ ವರ್ಗದ ಜನರ ಮನಮುಟ್ಟುವ ರೀತಿ ಹಾಡುಗಳನ್ನು ರಚಿಸಿ, ಸಂಗೀತ ನಿರ್ದೇಶನ ನೀಡಿರುವ ಹಂಸಲೇಖ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರು ಸದಾ ಮೆಚ್ಚುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದ ಕ್ಲಾಪ್ ಮಾಡಿಸಿದ್ದು, ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡು ನಾಡಿನ ಜನರ ಮನಗೆಲ್ಲಲಿದೆ ಎಂಬ ವಿಶ್ವಾಸ ಇದೆ ಎಂದರು.

   ಸಾಹಿತಿ, ಚಿತ್ರರಂಗದ ಕಲಾವಿದರು, ಸಂಗೀತ ರಚನೆಗಾರರು ಎಲ್ಲರೂ ತಮ್ಮ ಕ್ಷೇತ್ರದ ಮೂಲಕವೇ ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸ ಮಾಡಬೇಕು. ಅದರಲ್ಲಿ ಡಾ.ರಾಜ್‌ಕುಮಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಆಶಯಗಳನ್ನು ಅರಿತು ಚಲನಚಿತ್ರರಂಗದ ರಂಗದವರು ಅಳವಡಿಸಿಕೊಂಡಲ್ಲಿ ಸಮೃದ್ಧ ನಾಡು, ಜೊತೆಗೆ ಸೌಹಾರ್ದತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

   ಹಂಸಲೇಖ ಅವರು ಅನೇಕ ಹಾಡುಗಳನ್ನು ರಚಿಸಿ, ಸಂಗೀತ ನಿರ್ದೇಶಿಸುವ ಮೂಲಕ ಅನೇಕರ ಮನಸ್ಸಿನ ನೋವುಗಳನ್ನು ಹೊಗಲಾಡಿಸುವ ಕೆಲಸ ಮಾಡಿದ್ದು, ಅವರು ನಾಡಿನ ಜಿವಾದ ಆಸ್ತಿ ಎಂದು ಬಣ್ಣಿಸಿದರು.

Recent Articles

spot_img

Related Stories

Share via
Copy link