ಕೊಯಂಬತ್ತೂರು ಅಭ್ಯರ್ಥಿಯಾಗಿ ಅಣ್ಣಮಲೈ….!

ಕೊಯಂಬತ್ತೂರು

    ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ವಲಯದಲ್ಲಿ ಹೆಸರು ಮಾಡಿದ್ದ ಕೆ.ಅಣ್ಣಾಮಲೈ ಅವರು ಬಿಜೆಪಿ ಸೇರಿದ್ದಾರೆ. ತಮಿಳುನಾಡಿನಲ್ಲಿ ನೆಲೆ ಕಾಣಲು ಪರದಾಡುತ್ತಿರುವ ಬಿಜೆಪಿ ಪಾಲಿಗೆ ಅಣ್ಣಾಮಲೈ ವಿಶೇಷ ಎನ್ನಬಹುದು. ತಮಿಳುನಾಡು ರಾಜ್ಯ ಘಟಕದಲ್ಲಿ ತನ್ನ ಅಧ್ಯಕ್ಷರಾಗಿ 2021ರಿಂದ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

    ರಾಜ್ಯದ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈ ಕಣಕ್ಕಿಳಿದಿದ್ದಾರೆ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿದರು.

    ನಂತರದ ವರ್ಷ 2020 ರಲ್ಲಿ ಬಿಜೆಪಿ ಸೇರಿದ ಕೆಲವೇ ತಿಂಗಳಲ್ಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಮೂಲಕ ತಮಿಳುನಾಡಲ್ಲಿ ಅಸ್ತಿತ್ವ ಗಟ್ಟಿಗೊಳಿಸಲು ಬಿಜೆಪಿ ಅಂದಿನಿಂದಲೇ ರೂಪರೇಷೆ ಸಿದ್ಧಪಡಿಸಲು ಆರಂಭಿಸಿತು.  

    ಸಂಯೋಜಿತ ಯೋಚನೆ, ಆತ್ಮವಿಶ್ವಾಸ ಮತ್ತು ವಾಗ್ಮಿಯು ಆಗಿರುವ ಕೆ.ಅಣ್ಣಾಮಲೈ ಅವರು ಯುವಕರನ್ನು ಆಕರ್ಷಿಸುತ್ತಾರೆ. ತಮಿಳುನಾಡಿನಲ್ಲಿ ಪಕ್ಷದ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಅವರಲ್ಲಿದೆ ಎಂದು ಬಿಜೆಪಿ ನಂಬಿಕೆ ಇಟ್ಟಿದೆ.

   ದ್ರಾವಿಡ ಮತ್ತು ತಮಿಳು ರಾಷ್ಟ್ರೀಯತಾವಾದಿ ರಾಜಕೀಯತೆ ಹೊಂದಿರುವ ತಮಿಳುನಾಡಲ್ಲಿ ಬಿಜೆಪಿಯು ಇದುವರೆಗೆ ಹೆಚ್ಚಿನ ಚುನಾವಣಾ ಲಾಭ (ಸೀಟು-ಅಧಿಕಾರ) ಹೊಂದಲು ಸಾಧ್ಯವಾಗಿಲ್ಲ. ಸದ್ಯ ಅಣ್ಣಾಮಲೈ ಅವರಿಂದ ಇಲ್ಲಿ ಪ್ರಾಬಲ್ಯ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದ್ದು, ಅದಕ್ಕೆ ಈ ಚುನಾವಣೆಯಲ್ಲಿ ಬಹುಶಃ ಉತ್ತರ ಸಿಗುವ ನಿರೀಕ್ಷೆಗಳು ಇವೆ. 

   ತಜ್ಞರು ತಮಿಳುನಾಡು ರಾಜ್ಯದಲ್ಲಿ ಸುಮಾರು ಶೇಕಡಾ 40 ರಷ್ಟು ಟ್ಯಾಪ್ ಮಾಡದ ಮತ ಹಂಚಿಕೆಯನ್ನು ಸೂಚಿಸದರೆ, ಅದನ್ನು ಬಿಜೆಪಿ ಟ್ಯಾಪ್ ಮಾಡಲು ಯತ್ನಿಸುತ್ತದೆ. ಏಕೆಂದರೆ ತಳುನಾಡಿನಲ್ಲಿ ನಾಯಕತ್ವ ಜೊತೆಗೆ ಮತ ಹಂಚಿಕೆಯು ಅಧಿಕಾರ ಹಿಡಿಯ ನೀರ್ಣಾಯಕವಾಗಿದೆ.

   ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಮೀರಿ ಶೇಕಡಾ 40 ರಷ್ಟು ಟ್ಯಾಪ್ ಮಾಡದ ಮತ ಹಂಚಿಕೆ ಇದೆ. ಅನೇಕ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಮತದಾರರನ್ನು ಪರಿಪೂರ್ಣವಾಗಿ ಆಕರ್ಷಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ರಾಜಕೀಯ ಕುರಿತು ದಳಪತಿ ವಿಜಯ್ ಅವರ ರಾಜಕೀಯ ಸದಸ್ಯರೊಬ್ಬರು ಇತ್ತೀಚೆಗೆ ತಿಳಿಸಿದ್ದರು.

   ತಮಿಳುನಾಡು ರಾಜ್ಯ ರಾಜಕೀಯವು ಭವಿಷ್ಯದಲ್ಲಿ ದಳಪತಿ ವಿಜಯ್, ಬಿಜೆಪಿಯ ಅಣ್ಣಾಮಲೈ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಕೈ ಸೇರಬಹುದು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ. 

     ಬಿಜೆಪಿಯು ಸಂಕೀರ್ಣ ಸಂಬಂಧ ಹೊಂದಿರುವ ಕೊಯಂಬತ್ತೂರಿಂದ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ. ಸಾಂಪ್ರದಾಯಿಕ ಎಡ ಭದ್ರಕೋಟೆಯಾಗಿದೆ. ಹೀಗಾಗಿ ಇಲ್ಲಿ ಬಿಜೆಪಿ ಸಂಬಂಧ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲ ಎನ್ನಲಾಗಿದೆ.

     ಕೊಯಂಬತ್ತೂರಲ್ಲಿ ಡಿಎಂಕೆ 1996 ರಲ್ಲಿ ಸ್ಥಾನವನ್ನು ಕೊನೆಯದಾಗಿ ಗೆದ್ದಿತ್ತು. ಮಾಜಿ ಎಐಎಡಿಎಂಕೆ ನಾಯಕ ಮತ್ತು ಕೊಯಂಬತ್ತೂರು ಮೇಯರ್ ಗಣಪತಿ ರಾಜ್‌ಕುಮಾರ್ ಅವರನ್ನು ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು.

    ಬಿಜೆಪಿ ಶಾಸಕರನ್ನು ಲೋಕಸಭೆಗೆ ಕಳುಹಿಸಿದ ತಮಿಳುನಾಡು ಕ್ಷೇತ್ರಗಳಲ್ಲಿ ಕೊಯಮತ್ತೂರು ಮೊದಲ ಕ್ಷೇತ್ರವಾಗಿದೆ. 1998ರ ನಂತರ ತಮಿಳುನಾಡಿನಲ್ಲಿ ಬಿಜೆಪಿಯ ಋಣಾತ್ಮಕ ಅಧ್ಯಾಯ ಆರಂಭವಾಯಿತು. 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದಲ್ಲಿ ಎಲ್‌ಕೆ ಅಡ್ವಾಣಿ ಅವರ ಪಾತ್ರದ ಹಿನ್ನೆಲೆಯಲ್ಲಿ ಅವರು ಪ್ರತೀಕಾರಕ್ಕೆ ಗುರಿಯಾದರು. ದಾಪುಗಾಲು ಇಡುತ್ತಿದ್ದ ಬಿಜೆಪಿಗೆ ಹಿನ್ನಡೆ ಆಯಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap