ನವದೆಹಲಿ :
2024ರ ಐಪಿಎಲ್ ಟೂರ್ನಿ ಮುಕ್ತಾಯ ಬೆನ್ನಲ್ಲೇ ಆರ್ ಸಿಬಿ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದು ಇದರ ಬೆನ್ನಲ್ಲೇ ಇದೀಗ ಟೀಂ ಇಂಡಿಯಾದ ಆಟಗಾರ ಕೇದಾರ್ ಜಾದವ್ ಸಹ ನಿವೃತ್ತಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಆಲ್‌ರೌಂಡರ್ ಕೇದಾರ್ ಜಾಧವ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆಯ ಮಾಹಿತಿ ನೀಡಿದ್ದಾರೆ.
ಕೇದಾರ್ ಜಾಧವ್ 2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2014 ರಂದು ನವೆಂಬರ್ 16ರಂದು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದ್ದರು. 73 ಏಕದಿನ ಪಂದ್ಯಗಳನ್ನಾಡಿರುವ ಜಾಧವ್ 42.09 ಸರಾಸರಿಯಲ್ಲಿ 1,389 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಶತಕ ಮತ್ತು ಆರು ಅರ್ಧ ಶತಕಗಳನ್ನು ಗಳಿಸಿದರು. ಅಲ್ಲದೆ 27 ವಿಕೆಟ್‌ಗಳನ್ನು ಪಡೆದ್ದಾರೆ. 9 ಅಂತಾರಾಷ್ಟ್ರೀಯ T20 ಪಂದ್ಯಗಳಲ್ಲಿ 20.33ರ ಸರಾಸರಿಯಲ್ಲಿ 58 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 93 ಪಂದ್ಯಗಳಲ್ಲಿ 22.15 ಸರಾಸರಿಯಲ್ಲಿ 1,196 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದರು.
ಕೇದಾರ್ ಜಾಧವ್ ಬಗ್ಗೆ ಮಾತನಾಡುತ್ತಾ, ಭಾರತ ತಂಡವನ್ನು ಹೊರತುಪಡಿಸಿ, ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ದೀರ್ಘಕಾಲ ಆಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನೂ ಪ್ರತಿನಿಧಿಸಿದ್ದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕೇದಾರ್ ಜಾಧವ್ ಅದ್ಭುತ ಪ್ರದರ್ಶನ ನೀಡಿದರು.