ಹಾಸನ :
ರಾಜ್ಯದಲ್ಲಿ ಹಿಜಾಬ್, ಹಲಾಲ್, ಅಜಾನ್ ವಿವಾದದ ಬೆನ್ನಲ್ಲೇ ಇದೀಗ ಹೊಸ ಅಭಿಯಾನ ಶುರುವಾಗಿದ್ದು, ಮಾವಿನಹಣ್ಣಿನ ಮಾರ್ಕೆಟ್ ಹಿಂದುಗಳದ್ದಾಗಿರಬೇಕು.ಮಾವಿನ ಸೀಜನ್ ಆರಂಭವಾಗುತ್ತಿದ್ದಂತೆಯೇ ಹಾಸನದಲ್ಲಿ ಹೊಸ ಅಭಿಯಾನ ಆರಂಭವಾಗಿದ್ದು, ಮಾವಿನ ಹಣ್ಣು ಹೋಲ್ ಸೆಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳು ವೈರಲ್ ಆಗುತ್ತಿವೆ.
ಮಾವಿನ ಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು. ಹಿಂದೂ ಯುವಕರೇ ಮುಂದೆ ಬನ್ನಿ ಎಂದು ಕರೆ ನೀಡಲಾಗಿದೆ.ವಾಟ್ಸಪ್ ಗ್ರೂಪ್ ನಲ್ಲಿ ಅಭಿಯಾನ ಶುರುವಾಗಿದ್ದು, ಮಾವಿನ ಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕು. ಹಿಂದೂ ಯುವಕರೆ ಮುಂದೆ ಬನ್ನಿ ಎಂದು ಹಿಂದೂ ಸಂಘಟನೆಗಳು ಕರೆ ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ