ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೃಹತ್ ಫೇಕ್ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ..! ಆರೋಪಿಗಳು ಅರೆಸ್ಟ

ಬೆಂಗಳೂರು:

 ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೃಹತ್ ಫೇಕ್ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆಯಾಗಿದೆ. ಬೆಂಗಳೂರಿನ ಜಯನಗರ ಪೊಲೀಸರಿಂದ ಬೃಹತ್ ಫೇಕ್ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆಯಾಗಿದ್ದು, 20 ದಿನದಲ್ಲೇ 20 ಸಾವಿರಕ್ಕೆ ಮಾರ್ಕ್ಸ್ ಕಾರ್ಡ್ ರೆಡಿಯಾ ಗುತ್ತೆ.

ಡಿಗ್ರಿ, ಡಬಲ್ ಡಿಗ್ರಿ ಮಾರ್ಕ್ಸ್ ಕಾರ್ಡ್ ಮಾಡೋದ್ರಲ್ಲಿ ಈ ಆರೋಪಿಗಳು ಚಾಲಾಕಿಯಾಗಿದ್ದು, ಫೇಲ್ ಆಗಿದ್ದ ಸ್ಟೂಡೆಂಟ್ಸ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಈ ಆರೋಪಿಗಳು, ಕಷ್ಟಪಟ್ಟು ಯಾಕ್ ಓದ್ತೀರಾ. ಅರಾಮಾಗಿ ಕೆಲಸಕ್ಕೆ ಸೇರಿ ದುಡೀರಿ. ಮಾರ್ಕ್ಸ್ ಕಾರ್ಡ್ ನಾವ್ ಕೊಡ್ತೀವಿ ಅಂತಾ ಹೇಳಿ ಬಲೆಗೆ ಬೀಳಿಸುತ್ತಿದ್ದರು.

ಕ್ಲೋಸ್ ಆಗಿರೋ ಯುನಿವರ್ಸಿಟಿ ಹೆಸರಲ್ಲಿ ಮಾರ್ಕ್ಸ್ ಕಾರ್ಡ್ ತಯಾರಿಸ್ತಿದ್ದ ಆರೋ ಪಿಗಳು. ಜಯನಗರ ಪೊಲೀಸರಿಂದ ಫೇಕ್ ಮಾರ್ಕ್ಸ್ ಕಾರ್ಡ್ ತಯಾರಿಸ್ತಿದ್ದ ನಾಲ್ವರ ಬಂಧನ ಮಾಡಲಾಗಿದೆ. ದಿಲೀಪ್, ಧರ್ಮೇಂದ್ರ, ನರೇಶ್, ರಘು ಬಂಧಿತ ಆರೋಪಿಗಳಾಗಿದ್ದು. ಬಂಧಿತರಲ್ಲಿ ಧರ್ಮೇಂದ್ರ, ನರೇಶ್ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap