ಕೆಪಿಎಸ್ಸಿ 2011ರ ಬ್ಯಾಚ್​ನ ಕಡತ ಮಂಡಿಸಲು ಸಿಎಂ

ಬೆಂಗಳೂರು: 

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ.

     ರಾಜ್ಯದ ಎಲ್ಲ ಕಡೆ ಕೋವಿಡ್​ ಪ್ರೋಟೋಕಾಲ್​ ಬೇಕಾ? ಅಂತ ಸಚಿವರು ಕೇಳಿದ್ದಾರೆ. ಹೀಗಾಗಿ ನಾಲ್ಕೈದು ದಿನ ಬಿಟ್ಟು ತಜ್ಞರ ಜತೆ ಚರ್ಚಿಸಿ ಇತರ ನಗರಗಳಿಗೆ ರಿಲೀಫ್​ ಮಾಡಲು ನಿರ್ಧರಿಸಲಾಗಿದೆ.

    ಕೆಪಿಎಸ್ಸಿ 2011ರ ಬ್ಯಾಚ್ ಬಗ್ಗೆ ಪರಿಶೀಲನೆ ಮಾಡಿ ಕಡತ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಿದ ಸಿಎಂ, ಅಂಬರೀಷ್ ಸ್ಮಾರಕ‌ ನಿರ್ಮಿಸಲು 12 ಕೋಟಿ ಬಿಡುಗಡೆಗೆ ಅಸ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹತ್ತಾರು ಕಾರ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಅವುಗಳ ಪಟ್ಟಿ ಇಲ್ಲಿದೆ.

  • ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ.
  • ಅಂಬರೀಷ್ ಸ್ಮಾರಕ‌ ನಿರ್ಮಿಸಲು 12 ಕೋಟಿ ರೂ.

    ಮೀಸಲು.

  • ಬೆಂಗಳೂರು ಜಿಲ್ಲೆಯ ಪೂರ್ವ ತಾಲೂಕು ಹೊಸಕೋಟೆ ಕೆರೆಗೆ ನೀರು ತುಂಬಿಸಲು ಅನುದಾನ. ಕೆ.ಆರ್. ಪುರಂ ತ್ಯಾಜ್ಯ ನೀರು ಸಂಸ್ಕರಿಸಿ 22 ಕೆರೆಗೆ ನೀರು ಹರಿಸುವುದು.
  • ಕಾರ್ಕಳದ ನ್ಯಾಯಾಲಯಕ್ಕೆ 19 ಕೋಟಿ ರೂ. ಮಂಜೂರು.

    ಮುಳುಬಾಗಿಲು ಕೋರ್ಟ್​ಗೆ 16 ಕೋಟಿ ರೂ.

  • ಉಡುಪಿ ಕಾಪು ಜನಾರ್ಧನ ದೇವಾಲಯದ ಹತ್ತು ಸೆಂಟ್ ಜಾಗ ಭಂಟರ ಸಂಘಕ್ಕೆ. ರಾಜಘಟ್ಟದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ ಜಾಗಕ್ಕೆ ಮಾರ್ಗಸೂಚಿ ದರಕ್ಕೆ ರಿಯಾಯಿತಿ.
  • ಮೈಸೂರು ಮೂಕನಹಳ್ಳಿ ಒಕ್ಕಲಿಗರ ಸಂಘಕ್ಕೆ ನೀಡಿದ್ದ ಲ್ಯಾಂಡ್ ಯೂಸ್ ತಿದ್ದುಪಡಿ.
  • ಹಿರೀಸಾವೆ ಬಳಿ ಆದಿ ಚುಂಚನಗಿರಿ ಮಠಕ್ಕೆ ಇಪ್ಪತ್ತೆರಡು ಎಕರೆ ಜಾಗ. ಶಾಲೆ, ವಿದ್ಯಾರ್ಥಿ‌ನಿಲಯ, ಧ್ಯಾನ‌ಮಂದಿರ, ಅನಾಥಾಶ್ರಮ, ಇತರೆ ಕಲ್ಯಾಣ ಕಾರ್ಯಕ್ಕೆ ಬಳಸಿಕೊಳ್ಳಬೇಕು.
  • ನೋಂದಣಿ ಮುದ್ರಾಂಕ ಇಲಾಖೆಗೆ ಐಟಿ ಉಪಕರಣ ಖರೀದಿ ನಿರ್ವಹಣೆಗೆ ಮಾನ ಸಂಪನ್ಮೂಲ ಪೂರೈಕೆ ಮಾಡಲು 406 ಕೋಟಿ ರೂ. ಅನುದಾನ.
  • ಜೆಜೆಎಂ ಅಡಿ ಎಲ್ಲ‌ ಮನೆಗೆ ನೀರು ಕೊಡಲು ರಾಜ್ಯದ ಕಾಂಟ್ರಿಬ್ಯೂಷನ್​ಗಾಗಿ ವಿಶ್ವ ಬ್ಯಾಂಕ್​ನಲ್ಲಿ‌ ಲೋನ್ ಪಡೆಯಲು ಅನುಮತಿ.

    9 ಸಾವಿರ ಕೋಟಿಯಲ್ಲಿ 38೦೦ ಕೋಟಿ ಕೊಡುವುದು.

  • ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಗರೋತ್ಥಾನ ಯೋಜನೆಯಿಂದ 5 ವರ್ಷಕ್ಕೆ ಒಟ್ಟು 3885 ಕೋಟಿ ರೂ. ಕೊಡುವುದು.
  • ಬೆಂಗಳೂರು ನಗರಕ್ಕೆ ಅಮೃತ ಯೋಜನೆಯಡಿ 6 ಸಾವಿರ ಕೋಟಿ ರೂ. ಖರ್ಚು ಮಾಡಲು ಸಂಪುಟ ಅನುದಾನ.

 

Recent Articles

spot_img

Related Stories

Share via
Copy link
Powered by Social Snap