`ಜೇಮ್ಸ್​’ ಸಿನಿಮಾದ ಸ್ಪೆಷಲ್​ ಪೋಸ್ಟರ್​ ರಿಲೀಸ್​, ಯೋಧನ ಅವತಾರದಲ್ಲಿ ಅಪ್ಪುನ ಕಂಡು ಫ್ಯಾನ್ಸ್​ ಥ್ರಿಲ್​!

               ಪವರ್ ಸ್ಟಾರ್(Power Star)​.. ನಟಸಾರ್ವಭೌಮ.. ರಣವಿಕ್ರಮ.. ರಾಜಕುಮಾರ.. ಯುವರತ್ನ.. ಈ ಸಿನಿಮಾಗಳ ಹೆಸರು ನೆನಪಾದರೆ ಸಾಕು ಹೃದಯವೇ ಕಿವುಚಿದ ಹಾಗೇ ಆಗುತ್ತೆ. ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಅನ್ನಿಸುತ್ತೆ. ಇನ್ನೂ ಕೂಡ ಕರುನಾಡು ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ನೆನೆದು ಕಣ್ಣೀರಿಡುತ್ತಿದೆ.
        ಅವರು ಕೊನೆಯದಾಗಿ ನಟಿಸಿದ ‘ಜೇಮ್ಸ್​'(James) ಸಿನಿಮಾದ ಹೊಸ ಪೋಸ್ಟರ್​ ಕೂಡ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ ದಿವವೇ ಪುನೀತ್​ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್(James Special Poster) ಬಿಡುಗಡೆಯಾಗಿದೆ.
      ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಹೊಸದಾಗಿ ರಿಲೀಸ್​ ಆಗಿರುವ ಪೋಸ್ಟರ್​ ಈ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ.
             ಈ ಪೋಸ್ಟರ್​ ಕಂಡು ಅಪ್ಪು ಅಭಿಮಾನಿಗಳು ಅಪ್ಪು ವಿ ಮಿಸ್​ ಯೂ(We Miss You) ಅಂತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಇತ್ತೀಚೆಗೆ ಪೂರ್ಣಗೊಂಡಿತ್ತು. ಈಗ ಗಣರಾಜ್ಯೋತ್ಸವ(Republic Day)ದ ಪ್ರಯುಕ್ತ ಸಿನಿಮಾದಿಂದ ವಿಶೇಷ ಪೋಸ್ಟರ್​ ಒಂದು ರಿಲೀಸ್​ ಆಗಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಮತ್ತೊಂದೆಡೆ ಈ ಸಂಭ್ರಮವನ್ನು ಅಪ್ಪು ಅವರ ಜೊತೆ ಆಚರಿಸಲು ಇನ್ನೇಂದು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚೇತನ್​ ಕುಮಾರ್​ ಆಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಅವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಯೋಧನ ಅವತಾರದಲ್ಲಿ ಪುನೀತ್​ ರಾಜ್​ಕುಮಾರ್​!

ಹೌದು, ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಿರುವ ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​ ಕಂಡು ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಕೈಯಲ್ಲಿ ಗನ್​ ಹಿಡಿದು, ಅಪ್ಪು ನಡೆದುಕೊಂಡು ಬರುತ್ತಿರುವ ಪೋಸ್ಟರ್​ ಇದಾಗಿದೆ.

ಗಡಿ ಕಾಯುವ ಸೈನಿಕನಂತೆ ಅಪ್ಪು ಅವರ ಗೆಟಪ್​ ಇದೆ. ಹೀಗಾಗಿ ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಿದ್ದಾರೆ ಅವರ ಅಭಿಮಾನಿಗಳು.ಆಯಕ್ಷನ್​ ಸಿನಿಮಾಗಳ ಮೂಲಕ ಫೇಮಸ್​ ಆಗಿರುವವರು ನಿರ್ದೇಶಕ ಚೇತನ್​ ಕುಮಾರ್​. ಅದೇ ರೀತಿ, ಪುನೀತ್​ ರಾಜ್​ಕುಮಾರ್​ ಸಿನಿಮಾಗಳಲ್ಲೂ ಭರ್ಜರಿ ಆಯಕ್ಷನ್​ ಇದ್ದೇ ಇರುತ್ತದೆ.

ಪುನೀತ್​ ರಾಜ್​ಕುಮಾರ್​ ಅವರ ‘ಜೇಮ್ಸ್​’ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆ, ಅಪ್ಪು ಅಭಿಮಾನಿಗಳು ಪುನೀತ್​ ಸ್ಮಾರಕದ ಎದುರು 101 ಈಡುಗಾಯಿ ಹೊಡೆದಿದ್ದಾರೆ. ಕಂಠೀರವ ಸ್ಟುಡಿಯೋಗೆ ಅಭಿಮಾನಿಳ ದಂಡೆ ಆಗಮಿಸಿದೆ. ಅಪ್ಪು ನಮ್ಮ ಜೊತೆ ಇಲ್ಲದಿರುವುದನ್ನು ನೆನೆಸಿಕೊಂಡು ಮರುಕ ಪಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap