ಮುಂಬೈ :
ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರ ಪುತ್ರಿಯೂ ಆಗಿರುವ 11 ವರ್ಷದ ಆರಾಧ್ಯಾ ಬಚ್ಚನ್ ಅವರು ದೆಹಲಿಯ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ‘ನಕಲಿ ಸುದ್ದಿ’ ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 20 ರಂದು ವಿಚಾರಣೆ ನಡೆಯಲಿದೆ.
ಆರಾಧ್ಯ ಮೇಲೆ ಬಗ್ಗೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಅಭಿಷೇಕ್ ಟ್ರೋಲ್‌ಗಳನ್ನು ಟೀಕಿಸಿದ್ರು. ಬಳಿಕ ಆರಾಧ್ಯ ಬಚ್ಚನ್ ಒಂದಲ್ಲ ಒಂದು ಕಾರಣಕ್ಕಾಗಿ ಟ್ರೋಲ್‌ಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಬಾಬ್ ಬಿಸ್ವಾಸ್ ಪ್ರಚಾರದ ಸಮಯದಲ್ಲಿ, ಕೋಪಗೊಂಡ ಅಭಿಷೇಕ್ ತನ್ನ ಮಗಳ ಮೇಲೆ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದರು.
ಆರಾಧ್ಯ ಹೇರ್‌ಸ್ಟೈಲ್ ಒಂದೇ ರೀತಿ ಇದೆ, ಬದಲಾಗಿಲ್ಲ. ಈಗಲೂ ಆರಾಧ್ಯಾ ತಾಯಿ ಕೈ ಹಿಡಿದುಕೊಂಡೇ ಓಡಾಡುತ್ತಾರೆ ಎಂದು ಹೇಳಲಾಗಿತ್ತು.