ಬೆಂಗಳೂರು
ಲಘು ಉದ್ಯೋಗ ಭಾರತೀ (LUB) – ಬೆಂಗಳೂರು ಉತ್ತರ ವಿಭಾಗವು ಆಯೋಜಿಸುತ್ತಿರುವ SURFACEXP 2024 ಕಾರ್ಯಕ್ರಮದ ಮೊದಲ ಆವೃತ್ತಿಯು ಇಂದು ಪ್ಯಾಲೇಸ್ ಮೈದಾನದ ಗೇಟ್ ನಂ. 6, ಗ್ರ್ಯಾಂಡ್ ಕ್ಯಾಸಲ್ ನಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ವರ್ನರ್ ಫಿನ್‌ಲೆಯ ಕಂಪನಿ ನಿರ್ದೇಶಕ ಮತ್ತು ಸಿಇಒ ಶ್ರೀ ವಿಪ್ಲವ್ ಜೆ ಜಿ ಮತ್ತು ಚೆರೊನ್ ಇಂಡಿಯನ್ ಮೆಷಿನ್ ಟೂಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಜೇಶ್ ಟಿ ಘಾಶಿ ಉದ್ಘಾಟಿಸಿದರು. ಪ್ರದರ್ಶನವು 26 ರಿಂದ 28 ಸೆಪ್ಟೆಂಬರ್ 2024 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆಯಲಿದೆ.
ಈ ವರ್ಷದ ಪ್ರದರ್ಶನವು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ರಕ್ಷಣಾ, ವಿಮಾನಯಾನ ಮತ್ತು ಸಾರ್ವಜನಿಕ ವಲಯದ ವಿಭಾಗಗಳ ಪ್ರಮುಖ ಪಾಲುದಾರರನ್ನು ಆಕರ್ಷಿಸುತ್ತಿದೆ. ಕರ್ನಾಟಕ ಲಘು ಉದ್ಯೋಗ ಭಾರತಿಯ ಅಧ್ಯಕ್ಷ ಶ್ರೀ ಸಚ್ಚಿನ್ ಸಾಬ್ನಿಸ್ ಗೌರವಾತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ KSPCB (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ಅಧಿಕಾರಿಯಾದ ಶ್ರೀ ಕೆ.ಬಿ. ಕೋಟ್ರೇಶ್ ವಿಶೇಷ ಆಹ್ವಾನಿತರಾಗಿದ್ದರು.
ಲಘು ಉದ್ಯೋಗ ಭಾರತೀ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷರಾದ ಸಂಜಯ್ ಪಿ. ಭಟ್ ಈ ಸಂದರ್ಭದಲ್ಲಿ ಮಾತನಾಡಿ, “SURFACEXP 2024 ಉದ್ಯಮದ ತಜ್ಞರು ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಅನ್ವೇಷಿಸಲು ಮತ್ತು ಚಟುವಟಿಕೆ, ಸಹಕಾರ ಮತ್ತು ವ್ಯವಹಾರ ವೃದ್ಧಿಗೆ ವೇದಿಕೆಯನ್ನು ಒದಗಿಸುತ್ತದೆ” ಎಂದು ಹೇಳಿದರು
ಈ ಕಾರ್ಯಕ್ರಮದ ಕೊನೆಯ ದಿನವಾದ 28 ಸೆಪ್ಟೆಂಬರ್ 2024 ರಂದು ಸ್ಮಾಲ್ ಮತ್ತು ಮೀಡಿಯಂ ಎಂಟರ್ಪ್ರೈಸ್‌ಗಳ (MSME) ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ.