ಹುಬ್ಬಳ್ಳಿ-ಅರಸಿಕೆರೆ ಎಕ್ಸಪ್ರೆಸ್​ ರೈಲು ಸಂಚಾರ 2 ದಿನ ಭಾಗಶಃ ರದ್ದು

ಅರಸಿಕೆರೆ:

    ದೇವನೂರು ಮತ್ತು ಬಾಣಾವರ ನಿಲ್ದಾಣಗಳ ನಡುವೆ ಸುರಕ್ಷತೆಗೆ ಸಂಬಂಧಿತ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೀರೂರು ಮತ್ತು ಅರಸೀಕೆರೆ  ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರ ಭಾಗಶಃ ರದ್ದುಗಾಲಿವೆ ನೈಋತ್ಯ ರೈಲ್ವೆ ವಲಯ  ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ರೈಲುಗಳು ಭಾಗಶಃ ರದ್ದಾಗಲಿವೆ ಇಲ್ಲಿದೆ ಮಾಹಿತಿ.

  1. ರೈಲು ಸಂಖ್ಯೆ 16214 ಎಸ್‌ಎಸ್‌ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್​ಪ್ರೆಸ್ ರೈಲು ಸೆಪ್ಟೆಂಬರ್ 22 ರಂದು ಬೀರೂರು-ಆರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
  2. ರೈಲು ಸಂಖ್ಯೆ 16213 ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್​ ರೈಲು ಸೆಪ್ಟೆಂಬರ್ 23 ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ. 

    ಧಾರವಾಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಪರೀರ್ ಉರೂನ್ ಕಾರ್ಯಕ್ರಮ ಅಕ್ಟೋಬರ್ 14 ರಿಂದ 16ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿಗೆ ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಗಲವಿ ಹಾಲ್ಟ್​ ನಿಲ್ದಾಣದಲ್ಲಿ ಹಾದು ಹೋಗುವ ಎಂಟು ರೈಲುಗಳು ಎರಡು ನಿಮಿಷಗಳ ಕಾಲ ತಾತ್ಕಾಲಿಕವಾಗಿ ಇಲ್ಲಿ ನಿಲ್ಲುತ್ತವೆ.

  1. ರೈಲು ಸಂಖ್ಯೆ: 17415 ತಿರುಪತಿ-ಕೊಲ್ಲಾಪುರ ಹರಿಪ್ರಿಯಾ ಎಕ್ಸ್​ಪ್ರೆಸ್ ರೈಲು ನಾಗಲಾವಿ ಹಾಲ್ಟ್​ ನಿಲ್ದಾಣಕ್ಕೆ ಬೆಳಿಗ್ಗೆ 9:14ಕ್ಕೆ ಆಗಮಿಸಿ 9:16ಕ್ಕೆ ಹೊರಡಲಿದೆ.
  2. ರೈಲು ಸಂಖ್ಯೆ: 17332 ಎಸ್‌ಎಸ್‌ಎಸ್ ಹುಬ್ಬಳ್ಳಿ-ಮಿರಜ್​​ ಎಕ್ಸ್​ಪ್ರೆಸ್ ರೈಲು ನಾಗಲಾವಿ ಹಾಲ್ಟ್​ನಿಲ್ದಾಣಕ್ಕೆ ಬೆಳಿಗ್ಗೆ 11:40ಕ್ಕೆ ಆಗಮಿಸಿ 11:42ಕ್ಕೆ ಹೊರಡಲಿದೆ.
  3. ರೈಲು ಸಂಖ್ಯೆ 17317 ಎಸ್‌ಎಸ್‌ಎಸ್ ಹುಬ್ಬಳ್ಳಿ-ದಾದರ್ ಎಕ್ಸ್​ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 4:18ಕ್ಕೆ ಆಗಮಿಸಿ 4:20ಕ್ಕೆ ಹೊರಡಲಿದೆ.
  4. ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 6:40ಕ್ಕೆ ಆಗಮಿಸಿ 6:42ಕ್ಕೆ ಹೊರಡಲಿದೆ.
  5. ರೈಲು ಸಂಖ್ಯೆ 17416 ಕೊಲ್ಲಾಪುರ-ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 5:55ಕ್ಕೆ ಆಗಮಿಸಿ 5:57ಕ್ಕೆ ಹೊರಡಲಿದೆ.
  6. ರೈಲು ಸಂಖ್ಯೆ 17331 ಮೀರಜ್​-ಎಸ್​ಎಸ್​ಎಸ್​ ಹುಬ್ಬಳ್ಳಿ ಎಕ್ಸಪ್ರೆಸ್​ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12:15ಕ್ಕೆ ಆಗಮಿಸಿ 12:27ಕ್ಕೆ ಹೊರಡಲಿದೆ.
  7. ರೈಲು ಸಂಖ್ಯೆ 17318 ದಾದರ್​-ಎಸ್​ಎಸ್​ಎಸ್​ ಹುಬ್ಬಳ್ಳಿ ಎಕ್ಸ್​ಪ್ರೆಸ್​ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಿಗ್ಗೆ 10:13ಕ್ಕೆ ಆಗಮಿಸಿ, 10:15ಕ್ಕೆ ಹೊರಡಲಿದೆ.
  8. ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ಎಕ್ಸ್​​ಪ್ರೆಸ್​ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 7:40 ಗಂಟೆಗೆ ಬಂದು 7:42ಕ್ಕೆ ಹೊರಡಲಿದೆ.

Recent Articles

spot_img

Related Stories

Share via
Copy link