ಯುನೋಸ್ ಐರಿಸ್:
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದಾಗಿ ಅರ್ಜೆಂಟೀನಾ ಘೋಷಿಸಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂದು ಆರೋಪಿಸಿದ್ದು, ಈ ನಿಟ್ಟಿನಲ್ಲಿ ಅಮೆರಿಕದ ಹೆಜ್ಜೆಯನ್ನು ಅರ್ಜೆಂಟೀನಾ ಅನುಸರಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರ ವಕ್ತಾರರು ಈ ವಿಷಯ ತಿಳಿಸಿದ್ದಾರೆ.
ಮಿಲೀ ಅವರ ನಿರ್ಧಾರವು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ನಿರ್ವಹಣೆಯನ್ನು ಆಧರಿಸಿದ್ದಾಗಿದೆ ಎಂದು ವಕ್ತಾರ ಮ್ಯಾನುಯೆಲ್ ಅಡೋರ್ನಿ ವರದಿಗಾರರಿಗೆ ತಿಳಿಸಿದರು, ಅರ್ಜೆಂಟೀನಾ ನಮ್ಮ ಸಾರ್ವಭೌಮತ್ವದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಹಸ್ತಕ್ಷೇಪ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದೆ.