ಅರ್ಜುನ್ ಜನ್ಯ ಮ್ಯೂಸಿಕಲ್​ ನೈಟ್ಸ್​ನ ಉಚಿತವಾಗಿ ನೋಡೋದು ಹೇಗೆ ಗೊತ್ತಾ….?

ಬೆಂಗಳೂರು :

    ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಜಸ್ಕರಣ್ ಸಿಂಗ್ ಬಳಿ ‘ದ್ವಾಪರ..’ ಹಾಡನ್ನು ಹಾಡಿಸಿ ಅವರನ್ನು ಸ್ಟಾರ್ ಆಗಿ ಮಾಡಿದರು. ಈ ರೀತಿ ಅನೇಕ ಗಾಯಕರಿಗೆ ಅವಕಾಶಗಳನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಈಗ ಅವರು ಮ್ಯೂಸಿಕಲ್​ನೈಟ್ ಮಾಡಿದ್ದಾರೆ. ಇದನ್ನು ಉಚಿತವಾಗಿ ನೋಡುವ ಅವಕಾಶವನ್ನು ಜೀ ಕನ್ನಡ ಕಲ್ಪಿಸಿದೆ. ಈ ಬಗ್ಗೆ ಪ್ರೋಮೋನ ವಾಹಿನಿ ಹಂಚಿಕೊಂಡಿದೆ.

   ಅರ್ಜುನ್ ಜನ್ಯ ಅವರು ಹಾಡುವುದರ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ. ಅಲ್ಲದೆ ಜಸ್ಕರಣ್ ಮೊದಲಾದ ಖ್ಯಾತ ಗಾಯಕರು ಕೂಡ ಈ ಕಾನ್ಸರ್ಟ್​​ನಲ್ಲಿ ಭಾಗಿ ಆಗಿದ್ದಾರೆ. ಈ ಮೂಲಕ ಸಂಗೀತ ರಸಸಂಜೆ ಉಣಿಸಲು ಜೀ ವಾಹಿನಿ ಸಿದ್ಧವಾಗಿದೆ.ಸದ್ಯ ಜೀ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಇದಕ್ಕೆ ‘ಮ್ಯಾಜಿಕಲ್‌ ಕಂಪೋಸರ್ ಸಾರಥ್ಯದಲ್ಲಿ ಕೊಳ್ಳೇಗಾಲದಲ್ಲಿ ಮನರಂಜನೆಯ ಸಂಭ್ರಮ ತಂದ ಮನಸೆಳೆಯೋ ಹಾಡುಗಳ ಹಬ್ಬ. ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್. ಮಾರ್ಚ್ 9ಕ್ಕೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.
   ಸಿನಿಮಾ ವಿಚಾರಕ್ಕೆ ಬರೋದಾದರೆ ಅರ್ಜುನ್ ಜನ್ಯ ಅವರು ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿಯೂ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ‘45’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ, ಶಿವರಾಜ್​ಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಇನ್ನಷ್ಟೇ ರಿವೀಲ್ ಆಗಬೇಕಿದೆ.

Recent Articles

spot_img

Related Stories

Share via
Copy link