ಮದ್ವೆಗಿಂತ ಮುನ್ನ ಸೆಕ್ಸ್‌ಗೆ ಒಪ್ಪದ ಅಪ್ರಾಪ್ತ ವಧುವಿನ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಪಾಲ್ಘರ್‌: 

    ವ್ಯಕ್ತಿಯೊಬ್ಬ ತನ್ನ ನಿಶ್ಚಿತ ವಧು (ಅಪ್ರಾಪ್ತೆ)ವಿನೊಂದಿಗೆ ದೈಹಿಕ ಸಂಬಂಧಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರ  ದ ಪಾಲ್ಘರ್‌ನಲ್ಲಿ ನಡೆದಿದೆ. ಬುಧವಾರ ಬಿಬಲ್ಧರ್ ಗ್ರಾಮದಲ್ಲಿರುವ ಬಾಲಕಿಯ ಮನೆಗೆ ನೀಲೇಶ್ ಧೋಂಗ್ಡಾ ಎಂಬ ಆರೋಪಿ  ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿಯು ಸಂತ್ರಸ್ತೆಯ ಪೋಷಕರು ತಮ್ಮ ಜಮೀನಿಗೆ ಮಧ್ಯಾಹ್ನ ಹೋದಾಗ ಆಕೆಯನ್ನು ಭೇಟಿ ಮಾಡಿದ್ದ. ಈ ಸಮಯದಲ್ಲಿ, ಆರೋಪಿಯು ಆಕೆಯನ್ನು ತನ್ನೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ, ಆಕೆ ಇದಕ್ಕೆ ನಿರಾಕರಿಸಿದ್ದಾಳೆ. ಇದರ ಕೋಪಗೊಂಡ ಆರೋಪಿಯು, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

    ಅಪ್ರಾಪ್ತ ಬಾಲಕಿಗೆ 17 ವರ್ಷ ವಯಸ್ಸಾಗಿತ್ತು. 22 ವರ್ಷದ ನೀಲೇಶ್ ಧೋಂಗ್ಡಾ ಜೊತೆ ಮದುವೆ ನಿಶ್ಚಯವಾಗಿತ್ತು. ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ ಎನ್ನಲಾಗಿದೆ. ಈ ವಾರದ ಆರಂಭದಲ್ಲಿ ಆಕೆಯನ್ನು ಭೇಟಿಯಾಗಲು ಬಾಲಕಿಯ ಮನೆಗೆ ಬಂದಿದ್ದಾನೆ. ಈ ವೇಳೆ ಈ ಅಪರಾಧ ಎಸಗಿದ್ದಾನೆ. ಜವಾಹರ್ ಪ್ರದೇಶದ ಬಿವಾಲ್ಧರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

   ಅತ್ಯಾಚಾರ ಮಾಡಿ ಕೊಲೆಗೈದ ತಕ್ಷಣ ಕಿಡಿಗೇಡಿಯು ಗ್ರಾಮದ ಬಳಿಯ ಕಾಡಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆಯ ಪೋಷಕರು ಸಂಜೆ ವೇಳೆಗೆ ಹೊಲದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗಳು ಮೃತಪಟ್ಟಿರುವುದನ್ನು ನೋಡಿದ್ದಾರೆ. ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 

   ಆರೋಪಿ ನೀಲೇಶ್ ಧೋಂಗ್ಡಾನನ್ನು ಬುಧವಾರ ಬಂಧಿಸಿದ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

   ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೌರಿ ಜಿಲ್ಲೆಯ ಕೋಟ್ದ್ವಾರದಲ್ಲಿ ಈ ಘಟನೆ ನಡೆದಿದೆ. ರಜನೀಶ್ ಅಲಿಯಾಸ್ ರಾನು ಮತ್ತು ಅಂಕುಶ್ ಸೈನಿ ಎಂದು ಗುರುತಿಸಲಾದ ಶಂಕಿತ ಆರೋಪಿಗಳನ್ನು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಬಂಧಿಸಲಾಗಿದೆ.

    ಆಗಸ್ಟ್ 12 ರಂದು ಬಾಲಕಿಯ ತಾಯಿ ಕೋಟ್ದ್ವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ರಜನೀಶ್ ತನ್ನ ಅಪ್ರಾಪ್ತ ಮಗಳನ್ನು ಆಮಿಷವೊಡ್ಡಿ ಹರಿದ್ವಾರಕ್ಕೆ ಕರೆದೊಯ್ದು, ಹೋಟೆಲ್‌ನಲ್ಲಿ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೆ, ರಜನೀಶ್ ಮತ್ತು ಆತನ ಸ್ನೇಹಿತ ಅಂಕುಶ್ ಸೈನಿ, ವಿಡಿಯೊ ತೋರಿಸಿ ತನ್ನ ಮಗಳನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.

Recent Articles

spot_img

Related Stories

Share via
Copy link