ಇಸ್ಪೀಟ್ ಅಡ್ಡೆ ಮೇಲೆ ದಾಳಿ:19 ಬಂಧನ- ಕಾರುಗಳು-49 ಲಕ್ಷ ರೂ ನಗದು ವಶ

ಶಿರಸಿ:

     ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬೈರುoಬೆ ಸಮೀಪದ ರೆಸಾರ್ಟ್ ಒಂದರ ಮೇಲೆ ಶಿರಸಿ ಪೊಲೀಸ್ ಇಲಾಖೆ ದಾಳಿ ನಡೆಸಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ೧೯ ಜನರನ್ನು ಬಂಧಿಸಿದ ಘಟನೆ ಜುಲೈ 23ರಂದು ಸಂಜೆ ನಡೆದಿದೆ. ಶಿರಸಿ DYSP ಶ್ರೀಮತಿ ಗೀತಾ ಪಾಟೀಲ್ ನೇತೃತ್ವದಲ್ಲಿ,ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿ ೪೯,೫೦,೪೩೬ ರೂ. ನಗದು, ಹಾಗೂ ನಾಲ್ಕು ಕಾರುಗಳನ್ನು ವಶ ಪಡಿಸಿ ಕೊಂಡಿದ್ದಾರೆ.

    ಹಾವೇರಿಯ ವೈದ್ಯನೊಬ್ಬನ ಮಾಲೀಕತ್ವದ ರೆಸಾರ್ಟ್ ಇದು ಎನ್ನಲಾಗಿದೆ. ಇಲ್ಲಿನ ಸಿಬ್ಬಂದಿಗಳೂ ಹೊರಗಿನ ಜಿಲ್ಲೆಯವರೇ ಎನ್ನಲಾಗಿದ್ದು, ಅತ್ಯಂತ ರಹಸ್ಯವಾಗಿ ಇಸ್ಪೀಟ್ ಆಟ ನಡೆಯುತ್ತಿತ್ತು ಎಂದೂ ಕೇಳಿಬರುತ್ತಿದೆ. ಎಕರೆಗಟ್ಟಲೆ ಜಾಗೆಯಲ್ಲಿ ರೆಸಾರ್ಟ್ ಹರಡಿಕೊಂಡಿದ್ದು ದಟ್ಟ ಅರಣ್ಯ ಮದ್ಯದಲ್ಲಿದೆ. ಪೊಲೀಸರು ನಡೆಸಿದ ದಾಳಿಯಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡ್ಲೆಗುಂದಿಯ ಅನೀಲಕುಮಾರ ಜಿ.ಆರ್. ರುದ್ರಪ್ಪ ರೆಡ್ಡಿ (೩೦), ಹಾವೇರಿಯ ಕನಕಾಪುರದ ಭೀರಪ್ಪ ಪಕ್ಕೀರಪ್ಪ ಕೇರೆಗೌಡರ (೪೨), ದಾವಣಗೆರೆ ಜಿಲ್ಲೆಯ ದುಗ್ಗಮ್ಮನಪೇಟೆಯ ಬೀರೇಶ ಗೋಣೆಪ್ಪ (೨೬), ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿಯ ಶಂಕರಗೌಡ ವಿರುಪಾಕ್ಷ ಗೌಡ ಪಾಟೀಲ್ (೪೮), ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ತಿಮ್ಮಾಪುರದ ನಾಗರಾಜ ಈರಪ್ಪ ರಿತ್ತಿ (೪೪), ಹಾವೇರಿ ಜಿಲ್ಲೆಯ ಸಂಗೂರಿನ ಪ್ರದೀಪ ರುದ್ರಪ್ಪ ಅರಿಕೇರೆ (೪೮), ಹಾವೇರಿ ಜಿಲ್ಲೆಯ ಶಿಗ್ಗಾಂವ ಸಮೀಪದ ಶಡಗರವಳ್ಳಿಯ ಪ್ರಶಾಂತ ರಾಮಣ್ಣ ಹಸನಾಬಾದಿ (೩೫), ದಾವಣಗೆರೆ ನಿಟ್ಟುವಳ್ಳಿಯ ಜಬಿವುಲ್ಲಾ ಮಾಬೂ ಸಾಬ್ (೩೮), ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಲ್ಲೂರಿನ ರೇವಣಸಿದ್ದಯ್ಯ ವೀರಯ್ಯ ಹಿರೇಮಠ (೪೫), ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಮೇಡ್ಲೆರಿಯ ಈಶಪ್ಪ ಮಾಲತೇಶಪ್ಪ ಬಡಿಗೇರ (೪೦), ರಾಣಿಬೆನ್ನೂರಿನ ಅಸುಂಡಿಯ ಪ್ರಕಾಶ ಮಲ್ಲಪ್ಪ ಸಿದ್ದಣ್ಣನವರ (೪೪), ದಾವಣಗೆರೆಯ ಮಲ್ಲಿಕಾರ್ಜುನ ಸೋಮಪ್ಪ (೪೦), ದಾವಣಗೆರೆಯ ದುಗ್ಗಮ್ಮ ದೇವಸ್ಥಾನ ಸಮೀಪದ ಬಸವರಾಜ ಜಿ.ಆರ್ ರಾಮಪ್ಪ (೪೧), ದಾವಣಗೆರೆಯ ಜೋಹಾರನಗರದ ಚಮನಸಾಬ್ ಮೆಹಬೂಬ ಸಾಬ್ (೩೯), ಹಾವೇರಿ ಜಿಲ್ಲೆಯ ಕನಕಾಪುರದ ಬಸವರಾಜ ಮಲ್ಲಪ್ಪ ತಿಪ್ಪಣ್ಣನವರ (೩೫), ಹಾವೇರಿ ಜಿಲ್ಲೆಯ ಶಿವಾಜಿನಗರದ ೪ ನೇ ಕ್ರಾಸ್ ನ ಈರಣ್ಣ ಅಭಿನಂದನ ದಿನಕರ (೩೮ ), ರಾಣಿಬೆನ್ನೂರಿನ ಹುಣಸಿಕಟ್ಟೆಯ ಸಂತೋಷ ಗುಡ್ಡಪ್ಪ ರಾವತನಕಟ್ಟೆ (೩೧), ರಾಣಿಬೆನ್ನೂರಿನ ಕಂಚಿಗಾರ ಓಣಿಯ ವೀರಬಸಪ್ಪ ಹೊಳೆಬಸಪ್ಪ ಕಾಯಕದ (೪೫ ), ದಾವಣಗೆರೆಯ ನಿಟ್ಟವಳ್ಳಿಯ ಚೇತನ ಎನ್ ನಾಗರಾಜ ಕೆ (೩೬) ಬಂಧಿತರು.

    ಇವರೆಲ್ಲರೂ ಸೇರಿ ಭೈರುಂಬೆ ಗ್ರಾಪಂ ವ್ಯಾಪ್ತಿಯ ಅಗಸಾಲ ಗ್ರಾಮದ ವ್ಹಿ.ಆರ್.ಆರ್ ಹೋಂ ಸ್ಟೇನಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿರಸಿ ಡಿ.ಎಸ್.ಪಿ ಗೀತಾ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿತ್ತು. ೪೯,೫೦,೪೩೬ ರೂ. ನಗದು, ೪ ಕಾರು ಹಾಗೂ ೧೫ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೃಷ್ಣಮೂರ್ತಿ, ಜಗದೀಶ.ಎಂ, ಮಾರ್ಗದರ್ಶನದಲ್ಲಿ ಶಿರಸಿ ಡಿ.ಎಸ್.ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ಪಿ.ಎಸ್.ಐ ಅಶೋಕ ರಾಠೋಡ, ಸಿಬ್ಬಂದಿಗಳಾದ ಎ.ಎಸ್.ಐ ಪ್ರದೀಪ ರೇವಣಕರ, ಸಂತೋಷ ಕಮಟಗೇರಿ, ರಾಘವೇಂದ್ರ ಜಿ, ಗಣಪತಿ ಪಟಗಾರ, ಷಣ್ಮುಖ ಮಿರಾಶಿ, ರವಿ ಉಕ್ಕಡಗಾತ್ರಿ,ಭರತಕುಮಾರ, ಮಾರುತಿ ಗೌಡ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಕೋಟ್ರೇಶ ನಾಗರವಳ್ಳಿ, ಅಣ್ಣಪ್ಪ ಬುಡಗೇರಿ ಹಾಗೂ ಚಾಲಕರಾದ ಕೃಷ್ಣ ರೇವಣಕರ, ಮೌಲಾಲಿ ಮರಗಡಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link