ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ಸುಳ್ಳು ಹೇಳಿದ ಮಹಿಳೆ ಬಂಧನ …!

ರಾಮನಗರ

     ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಇದೀಗ ರಾಮನಗರ ಸೆನ್ ಠಾಣೆಯಲ್ಲಿ ಎಫ್ಐಆರ್​​ ದಾಖಲಾಗಿದೆ. ​ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್​​ರಿಂದ ದೂರು ಹಿನ್ನೆಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

   ಮಹಿಳೆ ಡಿಕೆ ಸುರೇಶ್ ರವರ ಪತ್ನಿ ಎಂಬ ಸೋಗಿನಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ಹಬ್ಬಿಸುತ್ತಿದ್ದಾರೆ. ಸುಳ್ಳು ಮಾಹಿತಿಯನ್ನು ನಿಜವೆಂದು ಸಾರ್ವಜನಿಕರು ನಂಬುವಂತೆ ಕೇಡುಬಯಸುವ ದುರುದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಮಹಿಳೆ ವಿರುದ್ಧ ಕಲಂ 319, 237, 336, 353 ಬಿ.ಎನ್.ಎಸ್ ಹಾಗೂ 66(ಡಿ) ಐ.ಟಿ ಆಕ್ಟ್ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಕೀಲ ಪ್ರದೀಪ್​​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Recent Articles

spot_img

Related Stories

Share via
Copy link