ರಾಜಾಸ್ಥಾನ :
ಎಂಟನೇ ಮದುವೆಯಾಗಲು ಹೊರಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ, ಈ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ. ಆಕೆ ಯುವಕರನ್ನು ಮದುವೆಯಾಗಿ ಕೆಲ ದಿನಗಳ ಕಾಲ ಅಲ್ಲೇ ಇದ್ದು ಬಳಿಕ ಬೆಳ್ಳಿ, ಬಂಗಾರವನ್ನೆಲ್ಲಾ ದೋಚಿ ಪರಾರಿಯಾಗುತ್ತಿದ್ದಳು.
ಏಳು ಮಂದಿ ಗಂಡಂದಿರು, ಮೂವರು ಮಕ್ಕಳಿದ್ದ ಮಹಿಳೆ ಎಂಟನೇ ಮದುವೆಯಾಗಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಈ ಘಟನೆ ರಾಜಸ್ಥಾನದ ಚುರುನಲ್ಲಿ ನಡೆದಿದೆ. ಮಹಿಳೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದಳು, ಆಕೆಗೆ ಮೂವರು ಮಕ್ಕಳಿದ್ದರು, ನಂತರ ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಳು. ನಂತರ ಆಕೆ ಮದುವೆಯನ್ನು ದಂಧೆಯಾಗಿಸಿಕೊಂಡಿದ್ದಳು.
ಶ್ರೀಮಂತರ ಹುಡುಗರನ್ನು ಬಲೆಗೆ ಬೀಳಿಸಿ ಮದುವೆಯಾಗಿ 10,12 ದಿನಗಳ ಕಾಲ ಅದೇ ಮನೆಯಲ್ಲಿದ್ದು ಬಳಿಕ ಲೂಟಿ ಮಾಡುತ್ತಿದ್ದಳು. ಇದುವರೆಗೆ ಆಕೆ ಏಳು ಮಂದಿಯನ್ನು ಮದುವೆಯಾಗಿ ವಂಚಿಸಿದ್ದಳು, 8ನೇ ವ್ಯಕ್ತಿಯನ್ನು ಮದುವೆಯಾಗಲು ತೆರಳಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಪೋಲೀಸ್ ಸ್ಟೇಷನ್ ನಲ್ಲಿ ಆಕೆ ಪೊಲೀಸರಿಗೆ ಪೂರ್ತಿ ಕಥೆ ಹೇಳಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ತಾನು ರತನ್‌ಗಢ ನಿವಾಸಿ ಎಂದು ಹೇಳಿದ್ದಾಳೆ. ಮೊದಲ ಪತಿಯಿಂದ ವಿಚ್ಛೇದನದ ನಂತರ, ಅವರು ಏಳು ಯುವಕರನ್ನು ಮದುವೆಯಾದಳು. ನಂತರ ಅವಳು ದರೋಡೆ ಮಾಡಿ ಓಡಿಹೋಗಿದ್ದಾಳೆ.
ಆಕೆಯದ್ದು ಗ್ಯಾಂಗ್ ಕೂಡ ಇದೆ, ಗ್ಯಾಂಗ್ ಜತೆ ಸೇರಿ ಕೆಲವು ಟ್ರಕ್ ಚಾಲಕರನ್ನು ಕೂಡ ದರೋಡೆ ಮಾಡಿದ್ದಾಳೆ. ಆಕೆ ಏಪ್ರಿಲ್ 8ರಂದು ಬಿಕಾನೇರ್ನ ಲುಂಕಾರನ್ಸರ್ ನಿವಾಸಿ ವೀರ್ಪಾಲ್ ಅವರನ್ನು ವಿವಾಹವಾಗಿದ್ದಳು, ಆದರೆ ಮದುವೆಯಾಗಿ 20 ದಿನಗಳ ಬಳಿಕ ಆಕೆ ಅಲ್ಲಿಂದ ಓಡಿಹೋಗಿದ್ದಳು, ಈಗ ಎಂಟನೇ ಮದುವೆಯಾಗಲು ಯೋಜನೆ ರೂಪಿಸಿದ್ದರು.