ಕ್ಯಾಲಿಫೋರ್ನಿಯಾ : 33 ವರ್ಷಗಳಿಂದ ನೆಲೆಸಿರುವ ಮಹಿಳೆಯನ್ನು ಏಕಾಏಕಿ ಬಂಧನ

ಕ್ಯಾಲಿಫೋರ್ನಿಯಾ

   ಕಳೆದ 35 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಸಿಖ್ ಮಹಿಳೆಯನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ( ಐಸಿಇ) ಬಂಧಿಸಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಲಿಫೋರ್ನಿಯಾದ 73 ವರ್ಷದ ಸಿಖ್ ಮಹಿಳೆ ಹರ್ಜೀತ್ ಕೌರ್ ಅವರನ್ನು ಕಳೆದ ವಾರ ಯಾವುದೇ ಕಾರಣವಿಲ್ಲದೆ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ( ಐಸಿಇ)ಬಂಧಿಸಿದೆ. ಅವರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರ ಬಂಧನವು ಸಿಖ್ ಸಮುದಾಯದಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ.

 
   ಹರ್ಜೀತ್ ಕೌರ್ ಅವರನ್ನು ಸೆಪ್ಟೆಂಬರ್ 8 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಂಧಿಸಲಾಯಿತು. ಮರುದಿನ ಅವರನ್ನು ಬೇಕರ್ಸ್‌ಫೀಲ್ಡ್‌ನಲ್ಲಿರುವ ಮೆಸಾ ವರ್ಡೆ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು . ಹರ್ಜೀತ್ ಕೌರ್ ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಯನ್ನು ಹೊಂದಿರಲಿಲ್ಲ .
   ಅವರು ಒಂದು ದಶಕಕ್ಕೂ ಹೆಚ್ಚು ಕಾಲ ನಿಯಮಿತ ವಲಸೆ ತಪಾಸಣೆಗಳನ್ನು ( ಪ್ರತಿ ಆರು ತಿಂಗಳಿಗೊಮ್ಮೆ ನಡೆಯುವ ) ಅನುಸರಿಸುತ್ತಿದ್ದರು . ಅವರ ಬಂಧನದ ನಂತರ, ಕಾಂಟ್ರಾ ಕೋಸ್ಟಾ ಕೌಂಟಿಯ ಎಲ್ ಸೊಬ್ರಾಂಟೆಯಲ್ಲಿ ಕೌರ್ ಅವರನ್ನು ಬೆಂಬಲಿಸಲು ಒಂದು ದೊಡ್ಡ ಜನಸಮೂಹ ಸೇರಿತು .
   ಅವರು ಸುಮಾರು 33 ವರ್ಷಗಳಿಂದ ಹರ್ಕ್ಯುಲಸ್‌ನಲ್ಲಿ ವಾಸಿಸುತ್ತಿದ್ದರು. ಜನರು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅವರು ಅಪರಾಧಿ ಅಲ್ಲ ಅವರು ನಮ್ಮ ಅಜ್ಜಿ ಅವರನ್ನು ಬಿಟ್ಟುಬಿಡಿ ಎನ್ನುವ ಮುಂತಾದ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು .
  ಡಜನ್ಗಟ್ಟಲೆ ವಾಹನಗಳು ಬೆಂಬಲವಾಗಿ ಹಾರ್ನ್ ಮಾಡುತ್ತಿದ್ದವು . ಅಜ್ಜಿಯನ್ನು ಮನೆಗೆ ತನ್ನಿ ಎಂದು ಬರೆದ ಪೋಸ್ಟರ್‌ಗಳನ್ನು ಸಹ ಜನರು ಹಿಡಿದಿದ್ದರು . ಎಲ್ ಸೊಬ್ರಾಂಟೆ ಸಿಖ್ ಗುರುದ್ವಾರದ ಕೆಳಗೆ ಮಹಿಳೆಯ ಬೆಂಬಲಿಗರು ಸುಮಾರು 200 ಜನ ಸೇರಿದ್ದರು ಎಂದು ವರದಿಗಳು ತಿಳಿಸಿವೆ .
  ಕೌರ್ ಅವರ ಆರೋಗ್ಯದ ಬಗ್ಗೆ ಅವರ ಪ್ರೀತಿಪಾತ್ರರು ಚಿಂತಿತರಾಗಿದ್ದಾರೆ . ಕೌರ್ ಥೈರಾಯ್ಡ್ , ಮೊಣಕಾಲು ನೋವು ಮತ್ತು ಮೈಗ್ರೇನ್ ಸೇರಿದಂತೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ . ಬಂಧನದಲ್ಲಿ ಅವರಿಗೆ ಸಾಕಷ್ಟು ಔಷಧಿ ಸಿಗುತ್ತಿಲ್ಲ ಎಂದು ಅವರ ಕುಟುಂಬ ಹೇಳುತ್ತಿದೆ.

Recent Articles

spot_img

Related Stories

Share via
Copy link