ಡೈಮಂಡ್ ಲೀಗ್​ನಿಂದ ಹಿಂದೆ ಸರಿದ ಅರ್ಷದ್‌ ನದೀಮ್‌ …!

ನವದೆಹಲಿ :

     ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತಕ್ಕೇರಿಸಿದ ನೀರಜ್ ಚೋಪ್ರಾ ಇದೀಗ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆಯಲಿರುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಲೀಗ್​ನಿಂದ ಪ್ಯಾರಿಸ್ ಒಲಿಂಪಿಕ್ಸ್​ನ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್ ಹಿಂದೆ ಸರಿದಿದ್ದಾರೆ.

 
   ಇನ್ನು ನೀರಜ್ ಚೋಪ್ರಾ ಅವರೊಂದಿಗೆ ವಿಶ್ವದ ಅಗ್ರಗಣ್ಯ ಜಾವೆಲಿನ್ ಎಸೆತಗಾರರಾದ ಜೆಕ್ ರಿಪಬ್ಲಿಕ್​ನ ಜಾಕುಬ್ ವಡ್ಲೆಜ್ ಮತ್ತು ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ವಿಶೇಷ ಎಂದರೆ ಅಂಡರ್ಸನ್ ಪೀಟರ್ಸ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಾಗೆಯೇ ಟೋಕಿಯೋ ಒಲಿಂಪಿಕ್ಸ್​ನಲ್ಲಿ ವಡ್ಲೆಜ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಮೂವರು ಒಲಿಂಪಿಕ್ಸ್ ಪದಕ ವಿಜೇತರು ಡೈಮಂಡ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.