ಸಚಿವ ತಿಮ್ಮಾಪುರ ವಿರುದ್ಧ ಆರ್ ಅಶೋಕ ವಾಗ್ದಾಳಿ….!

ಬೆಂಗಳೂರು

    ಕರ್ನಾಟಕ ಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಈ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು ಈಗ ಈ ಸರ್ಕಾರದ ಸಚಿವರು ಹಫ್ತಾ ವಸೂಲಿಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಅಬಕಾರಿ ಇಲಾಖೆಯಲ್ಲಿ ಸಚಿವ ತಿಮ್ಮಾಪುರ ವಾರಕ್ಕೆ 18 ಕೋಟಿ ರೂ. ಮದ್ಯದಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮದ್ಯದಂಗಡಿ ಮಾಲೀಕರೇ ದೂರು ಕೊಟ್ಟಿದ್ದಾರೆ. ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ವೈನ್ ಸ್ಟೋರ್​​ಗಳಿವೆ. ಪ್ರತಿಯೊಂದರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.

   ನಮ್ಮ ವಿರುದ್ಧ ಹಿಂದೆ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಾವು ನಿಮ್ಮನ್ನು ಸನ್ಮಾನ ಮಾಡಲು ಆಗಲಿಲ್ಲ. ಈಗ ಪೇಸಿಎಂ ಪೋಸ್ಟರ್ ಅಂಟಿಸಿದಾಗ ಹೇಳಿ ಬಂದು ಸನ್ಮಾನ ಮಾಡುತ್ತೇವೆ ಎಂದು ಅಶೋಕ್ ವ್ಯಂಗ್ಯವಾಡಿದರು.

 
   ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸ್ತಾರೆಂದು ಗೊತ್ತಾ? ಇವರೇ ಲೋಕಾಯುಕ್ತ ವಿಚಾರಣೆಗೆ ಸಮಯ ನಿಗದಿ ಮಾಡಿದ್ದಾರಾ ಎಂದು ಅಶೋಕ್ ಪ್ರಶ್ನೆಗಳ ಮಳೆಗೈದರು. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಮಾಸಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ಮಂಗಳವಾರ ​​ಆರೋಪಿಸಿತ್ತು.

Recent Articles

spot_img

Related Stories

Share via
Copy link