ಭಾರತದಿಂದ ವಿಶ್ವದ ಅತಿ ಉದ್ದದ ಹೈಡ್ರೋಜನ್ ಟ್ರೈನ್: ಅಶ್ವಿನಿ ವೈಷ್ಣವ್

ನವದೆಹಲಿ

   ಭಾರತೀಯ ರೈಲ್ವೆಯಿಂದ ವಿಶ್ವದಲ್ಲೇ ಅತಿ ಉದ್ದದ ಮತ್ತು ಅತಿಶಕ್ತಿಶಾಲಿ ಎನಿಸುವ ಹೈಡ್ರೋಜನ್ ಟ್ರೈನ್ ಸಿದ್ಧವಾಗುತ್ತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು ಸದ್ಯದಲ್ಲೇ ಪ್ರಾಯೋಗಿಕವಾಗಿ ಇದರ ಸಂಚಾರ ನಡೆಯಲಿದೆ. ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಈ ಬಗ್ಗೆ ವಾರಾಂತ್ಯದಲ್ಲಿ ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಜರ್ಮನಿ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಬಳಿಕ ಭಾರತವೇ ಹೈಡ್ರೋಜನ್ ಟ್ರೈನ್ ಅನ್ನು ಅಭಿವೃದ್ಧಿಪಡಿಸಿರುವುದು. ಆದರೆ, ಈ ಮೇಲಿನ ದೇಶಗಳಲ್ಲಿರುವ ಹೈಡ್ರೋಜನ್ ರೈಲುಗಳ ಸಾಮರ್ಥ್ಯ 500ರಿಂದ 600 ಹಾರ್ಸ್​ಪವರ್ (ಎಚ್​ಪಿ) ಮಾತ್ರವೇ ಇರುವುದು. ಭಾರತದ ಹೈಡ್ರೋಜನ್ ರೈಲಿನ ಕೆಪಾಸಿಟಿ 1,200 ಎಚ್​ಪಿಯಷ್ಟಿದೆ. ಇದು ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲೂ ಎನ್ನಲಾಗಿದೆ. 

   ಹೈಡ್ರೋಜನ್ ರೈಲುಗಳಲ್ಲಿ ಫುಯಲ್ ಸೆಲ್​ಗಳನ್ನು ಇರಿಸಲಾಗುತ್ತದೆ. ಇಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಎರಡೂ ಸಂಯೋಜನೆಗೊಂಡಾಗ ವಿದ್ಯುತ್ ಉತ್ಪಾದನೆ ಆಗುತ್ತದೆ. ಈ ವಿದ್ಯುತ್​ನಿಂದ ಮೋಟಾರು ಶಕ್ತಿ ಪಡೆದು ರೈಲನ್ನು ಚಲಿಸುವಂತೆ ಮಾಡುತ್ತದೆ. 

   ಈ ಪ್ರಕ್ರಿಯೆಯಲ್ಲಿ ಮಾಲಿನ್ಯ ಹೊರಬರುವುದಿಲ್ಲ. ನೀರು ಬೈಪ್ರಾಡಕ್ಟ್ ಆಗಿರುತ್ತದೆ. ಡೀಸಲ್ ಚಾಲಿತ ರೈಲಿಗೆ ಹೋಲಿಸಿದರೆ ಇದರ ಶಬ್ದ ಮಾಲಿನ್ಯವೂ ಕಡಿಮೆಯೇ. ಹೀಗಾಗಿ, ಹೈಡ್ರೋಜನ್ ರೈಲು ಗಮನ ಸೆಳೆಯುತ್ತದೆ. ಇದಕ್ಕೆ ರೀಫುಯಲಿಂಗ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. 20 ನಿಮಿಷದಲ್ಲಿ ರೀಫುಯೆಲಿಂಗ್ ಮಾಡಿದರೆ 18 ಗಂಟೆ ಕಾಲ ಇದು ಸಂಚರಿಸಬಲ್ಲುದು ಎನ್ನುತ್ತಾರೆ ತಜ್ಞರು.

Recent Articles

spot_img

Related Stories

Share via
Copy link