‘ದಿ.ನಟ ಪುನೀತ್ ರಾಜ್ ಕುಮಾರ್’ಗೆ ಗೌರವ ಡಾಕ್ಟರೇಟ್, ಪ್ರಶಸ್ತಿ ಸ್ವೀಕರಿಸಿ ಕಣ್ಣೀರಿಟ್ಟ ‘ಅಶ್ವಿನಿ’ 

ಮೈಸೂರು:

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದಿಂದ ದಿವಂಗತ ನಟ ಪುನೀತ್ ರಾಜ್ ಕುಮಾರ್ ಗೆ  ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಿತ್ತು. ಈ ಪ್ರಶಸ್ತಿಯನ್ನು, ಇಂದು ಪುನೀತ್ ಪತ್ನಿ ಅಶ್ವಿನಿಯವರು  ಸ್ವೀಕರಿಸಿದ ಅವರು ಭಾವುಕರಾಗಿ ಕಣ್ಣೀರಿಟ್ಟರು.

ಇಂದು ಮೈಸೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಂತ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ, ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಮರಣೋತ್ತರವಾಗಿ ಪುನೀತ್ ರಾಜ್ ಕುಮಾರ್ ಗೆ ನೀಡಲಾಗಿದ್ದಂತ ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ಬಳಿಕ ಪುನೀತ್ ನೆನೆದು ಕಣ್ಣೀರಿಟ್ಟರು.

ಪದ್ಮಶ್ರೀ ಪುರಸ್ಕೃತ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದರ ಬದುಕಿನ ಸ್ಫೂರ್ತಿದಾಯಕ ಪಯಣವಿದು!

ಈ ಹಿಂದೆ ‘ಗೌರವ ಡಾಕ್ಟರೇಟ್’ ಕೊಡ್ತೀವಿ ಅಂದಾಗ, ಅಂದು ನಟ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ.?

ಈ ಬಗ್ಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂಬುದಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದಂತ ಸಂದರ್ಭದಲ್ಲಿ, ಪುನೀತ್ ಪತ್ನಿ ಅಶ್ವಿನಿ ಮಾತನಾಡಿ, ಅಂದು ಪುನೀತ್ ರಾಜ್ ಕುಮಾರ್ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡ ಅವರು, ಈ ಹಿಂದೆ ಹಲವು ಬಾರಿ ಅಪ್ಪುಗೆ ಗೌರವ ಡಾಕ್ಟರೇಟ್ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಆದ್ರೇ. ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

ಕಾಶ್ಮೀರ ಫೈಲ್ಸ್ ರೀತಿ ಮುಸ್ಲಿಮರ ಕೊಲೆ ಬಗ್ಗೆಯೂ ಚಿತ್ರ ನಿರ್ಮಿಸಿ: ಅಧಿಕಾರಿ ಸಲಹೆ

ಇದಲ್ಲದೇ, ತಂದೆಯವರಿಗೆ ನೀಡಿದ್ದೇವೆ. ನಿಮಗೂ ಗೌರವ ಡಾಕ್ಟರೇಟ್ ನೀಡುತ್ತೇವೆ ಎಂದಾಗ, ಅವರದ್ದೇ ತೂಕ ಬೇರೆ. ನನ್ನದು ಬೇರೆ. ನಾನಿನ್ನೂ ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿಲ್ಲ ಎಂಬುದಾಗಿ ವಿನಯಪೂರ್ವಕವಾಗಿ ನಿರಾಕರಿಸಿದ್ದನ್ನು ಸ್ಮರಿಸಿ, ಗದ್ಗದಿತರಾಗಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap