100 ಅಲ್ಲ 1 ಸಾವಿರ ಕೋಟಿ ಕೊಟ್ಟರು ಬಿಜೆಪಿ ಸೇರುವುದಿಲ್ಲ : ಆಸೀಫ್ ಸೇಠ್

ಬೆಳಗಾವಿ:

    ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಲು ಕೈ ಶಾಸಕರಿಗೆ ಕೇಸರಿ ಪಕ್ಷದಿಂದ ಭಾರೀ ಆಫರ್ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನನಗೆ 100 ಕೋಟಿ ಅಲ್ಲ, 1000 ಸಾವಿರ ಕೋಟಿ ಕೊಟ್ಟರು ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ.

   ಈ ಹಿಂದೆ ‘ಆಪರೇಷನ್ ಕಮಲ’ದ ಮೂಲಕ ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸಲು ಬಿಜೆಪಿಗೆ ಸಾಧ್ಯವಾಯಿತು. ಈಗ ಅದೇ ರೀತಿ ಕಾರ್ಯಾಚರಣೆ ನಡೆಸುವ ಮೂಲಕ ಮತ್ತದೆ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಆಪರೇಷನ್ ಕಮಲದ ಮೂಲಕ ಬಿಜೆಪಿ 10-15 ಕಾಂಗ್ರೆಸ್ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶದೊಂದಿಗೆ ಸರ್ಕಾರ ರಚಿಸಿದೆ. ನಮ್ಮಲ್ಲಿ 135 ಶಾಸಕರಿದ್ದಾರೆ. ಬಿಜೆಪಿ 50 ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ, ಆದರೆ ಈ ಬಾರಿ ಐವರು ಶಾಸಕರು ಸಹ ಬಿಜೆಪಿಗೆ ಹೋಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಎಂದು ಅವರು ಹೇಳಿದರು.

   ತಾವು ಮತ್ತು ತಮ್ಮ ಸಹೋದರ ಬೆಳಗಾವಿ ಉತ್ತರ ಮಾಜಿ ಶಾಸಕ ಫಿರೋಜ್ ಸೇಠ್ ಹಲವು ವರ್ಷಗಳಿಂದ ಕಾಂಗ್ರೆಸ್ಸಿಗರಾಗಿದ್ದೇವೆ, ಬೇರೆ ರಾಜಕೀಯ ಪಕ್ಷಗಳಿಂದ ನಮಗೆ ಯಾವುದೇ ಆಫರ್ ಬಂದಿಲ್ಲಸಾವಿರ ಕೋಟಿ ಕೊಟ್ಟರು ನಾವು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಎಲ್ಲಾ 135 ಶಾಸಕರು ಪಕ್ಷದಲ್ಲಿ ಉಳಿಯಲು ಬದ್ಧರಾಗಿದ್ದಾರೆ ಮತ್ತು ಯಾರೂ ಬಿಜೆಪಿಗೆ ಸೇರುವುದಿಲ್ಲ, ಆದರೆ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 1 ವರ್ಷದಿಂದ ವ್ಯರ್ಥ ಕಸರತ್ತು ಮಾಡುತ್ತಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap