ಗುವಾಹಟಿ
ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭೂಕಂಪದ ಅನುಭವವಾಗಿದೆ. ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1 ಎಂದು ದಾಖಲಾಗಿದೆ. ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪನವು ಬೆಳಗಿನ ಜಾವ 2.25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಇದುವರೆಗೆ ಯಾವುದೇ ಆಸ್ತಿಪಾಸ್ತಿ ನಷ್ಟ ಅಥವಾ ಸಾವುನೋವು ಸಂಭವಿಸಿದ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂದು ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಭೂಕಂಪದ ಕೇಂದ್ರಬಿಂದು ಇದ್ದ ಕಾರಣ ಅದರ ಪರಿಣಾಮ ಹೆಚ್ಚು ಇರಲಿಲ್ಲ ಎಂದು ಅವರು ಹೇಳಿದರು. ಒಡಿಶಾದ ಪಾರಾದೀಪ್, ಪುರಿ, ಬೆರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು.
5 ರ ತೀವ್ರತೆಯ ಭೂಕಂಪವನ್ನು ಮಧ್ಯಮ ತೀವ್ರತೆ ಎಂದು ಪರಿಗಣಿಸಲಾಗುತ್ತದೆ. ಇದು ಶಬ್ದವನ್ನುಂಟು ಮಾಡುತ್ತದೆ ಹಾಗೆಯೇ ಮನೆಯೊಳಗಿನ ವಸ್ತುಗಳಿಗೆ ಸಣ್ಣ ಹಾನಿಯಾಗಬಹುದು.ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಟೆಸ್ಟ್ ಮಾಪಕ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ 1 ರಿಂದ 9 ರವರೆಗಿನ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಭೂಕಂಪದ ಸಮಯದಲ್ಲಿ ಭೂಮಿಯ ಒಳಗಿನಿಂದ ಬಿಡುಗಡೆಯಾಗುವ ಶಕ್ತಿಯ ತೀವ್ರತೆಯನ್ನು ಇದರಿಂದ ಅಳೆಯಲಾಗುತ್ತದೆ. ಈ ತೀವ್ರತೆಯಿಂದ ಭೂಕಂಪದ ತೀವ್ರತೆಯನ್ನು ಅಂದಾಜಿಸಲಾಗುತ್ತದೆ.
