ಕಲಬುರಗಿ:
ನಗರದ ಪೂಜಾರಿ ಚೌಕ್ ಬಳಿಯ ಎಸ್.ಬಿ.ಐ ಎಟಿಎಂನಲ್ಲಿನ ಸಿಸಿಟಿವಿ ಕ್ಯಾಮರಾಗಳಿಗೆ ಬ್ಲ್ಯಾಕ್ ಸ್ಟೇ ಹೊಡೆದ ಖರ್ತನಾಕ ಕಳ್ಳ ರು ಎಟಿಎನ ಬಾಕ್ಸ್‌ಗೆ ವೆಲ್ಡಿಂಗ್ ಕಟರ್‌ನಿಂದ ಕಟ್ ಮಾಡಿ ಅದರಲ್ಲಿದ್ದ 18 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಪೂಜಾರಿ ಚೌಕ್ ಬಳಿಯ ಎಸ್.ಬಿ.ಐ ಬ್ಯಾಂಕ್‌ಗೆ ಸೇರಿದ ಎ.ಟಿ.ಎಂ ಇದೀಗ ಕಳ್ಳತನವಾಗಿದೆ.
ಎಸ್.ಬಿ.ಐ ಬ್ಯಾಂಕ್‌ನವರು ಖಾಸಗಿ ಕಂಪನಿಯೊಂದಕ್ಕೆ ಹಣ ಹಾಕಲು ಗುತ್ತಿಗೆ ನೀಡಿದ್ದು ಎಂದಿನಂತೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ಕಂಪನೀಯವರು 18 ಲಕ್ಷ ಹಣವನ್ನು ಪೂಜಾರಿ ಚೌಕ್ ಬಳಿಯ ಎಸ್.ಬಿ.ಐ ಎಟಿಎಂಗೆ ಹಾಕಿ ಹೋಗಿದ್ದಾರೆ.
ಈ ಎಟಿಎಂನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನಿಯೋಜನೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಖದೀಮರು ಹಣ ಹಾಕುವುದನ್ನೇ ಕಾಯುತ್ತ ಕುಳಿತಿದ್ದರು. ಎನ್ನುವಂತೆ ಹಣ ಹಾಕಿದ ಕೆಲವೆ ಗಂಟೆಗಳಲ್ಲಿ ಸಮಯವನ್ನು ಸಾಧಿಸಿದ ಕಳ್ಳರು ಬೆಳಗಿನ ಜಾವ ಎಟಿಎಂಗೆ ಎಂಟ್ರಿಕೊಟ್ಟ ಕಳ್ಳರು ಎಟಿಎಂನಲ್ಲಿನ ಸಿಸಿಟಿವಿ ಕ್ಯಾಮರಾಗಳಿಗೆ ಬ್ಯಾಕ್ ಸ್ಟೇ ಹೊಡೆದು ವೆಲ್ಡಿಂಗ್ ಮಾಡುವ ಮಶೀನ್‌ನಿಂದ ಎಟಿಎಂ ಹಣದ ಬಾಕ್ಸ್‌ನ್ನು ಕಟ್ ಮಾಡಿ ಹಾಕಿದ್ದ 18 ಲಕ್ಷ ಹಣವನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಎಟಿಎಂ ಕಳ್ಳತನವಾದ ಕುರಿತು ಮಾಹಿತಿ ಕಲೆ ಹಾಕಿದ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಡಿಸಿಪಿರವರಾದ ಕನೀತಾ ಸಿಕ್ರೇವಾಲ್, ಪ್ರವೀಣ ನಾಯಕ, ಎಸಿಪಿ ಡಿ.ಜಿ ರಾಜಣ್ಣ, ಪಿಎಸ್‌ಐ ಬಸವರಾಜ ಅವರು ಹಾಗೂ ಸಿಬ್ಬಂದಿಗಳು ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸ್ಥಳವನ್ನು ಪರಿಶೀಲಿಸಿದ್ದಾರೆ.
ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಎಟಿಎಂ ಖದೀಮರ ಪತ್ತೆಗೆ ಜಾಲ ಬೀಸಿದಲ್ಲದೇ ಕಳ್ಳರು ಎಟಿಎಂ ಪ್ರವೇಶ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು, ನಾಶ ಪಡಿಸಿದವರೆಗಿನ ದೃಶ್ಯಗಳು ಹಾಗೂ ಎಟಿಂ ಅಂಗಡಿ ಮುಂಗಟುಗಳು, ಮನೆಗಳ ಹತ್ತಿರದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಬಂದ ಖದೀಮರು: ಬುಧವಾರ ಬೆಳಗಿನ ಜಾವ ನಡೆದ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಂ ಪಕ್ಕದಲ್ಲಿರುವ ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ಎಟಿಎಂ ಕಳ್ಳರು ಕಾರಿನಲ್ಲಿ ಬಂದು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಖದೀಮರ ಕುರಿತು ಸಿಸಿಟಿವಿ ಸುಳಿವು ನೀಡುತ್ತಿದೆ ಎಂದು ಹೇಳಲಾಗುತ್ತಿದ್ದು ಕಳ್ಳರು ಐಶಾರಾಮಿ ಕಾರಿನಲ್ಲಿ ಬಂದು ಎಟಿಎಂನಲ್ಲಿನ 18 ಲಕ್ಷ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.
