ಶಿರಾ: ವೈರಲ್ ಆದ ಆಡಿಯೋ : ಅಧ್ಯಕ್ಷರ ರಾಜೀನಾಮೆಗೆ ಪಟ್ಟು

ಶಿರಾ :

      ಕಳೆದ ತಿಂಗಳ ಹಿಂದೆ ನಗರಸಭೆಗೆ ನಡೆದ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಸಂಬಂಧ ಅಕ್ರಮ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಅಧ್ಯಕ್ಷರು-ಆಯುಕ್ತರು ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಈ ಕೂಡಲೇ ಸ್ಥಾಯಿ ಸಮಿತಿಯ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸದಸ್ಯರು ಪಟ್ಟಿಗೆ ಕೂತ ಪ್ರಸಂಗ ನಡೆಯಿತು.

     ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಆಂಜಿನಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ರಾಜೀನಾಮೆಗೆ ಪಟ್ಟು ಹಿಡಿದರು. ಸಭೆ ಆರಂಭಗೊಳ್ಳುತ್ತಿದ್ದಂತೆಯೆ ಯಾವುದೇ ವಿಚಾರಗಳ ಚರ್ಚೆಗೆ ಆಸ್ಪದ ನೀಡದ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪೂಜಾ ಪೆದ್ದರಾಜು, ಶಿವಶಂಕರ್, ಬರ‍್ಹಾನ್, ಜೀಷಾನ್, ಜಾಫರ್,   ಸೇರಿದಂತೆ ಅನೇಕ ಸದಸ್ಯರು ರಾಜೀನಾಮೆಗೆ ಪಟ್ಟು ಹಿಡಿದರು.

     ಪೂಜಾ ಮಾತನಾಡಿ, ಸದಸ್ಯರನ್ನು ಈ ಹಿಂದೆ ಸದಸ್ಯರಿಬ್ಬರು ಅವಾಚ್ಯ ಶಬ್ದಗಳಿಂದ ಮಾತನಾಡಿ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದಾಗ ತನಿಖೆ ಕೈಗೊಳ್ಳುವ ಭರವಸೆ ನೀಡಿದ್ದಿರಿ. ಈಗ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ ಸಂಬಂಧವೂ ಅಕ್ರಮ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಕೂಡಲೇ ಸ್ಥಾಯಿ ಸಮಿತಿಯ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದರು.

    ಆಡಿಯೋ ವೈರಲ್ ಬಗ್ಗೆ ಸಮಗ್ರ ದಾಖಲೆ ನೀಡಿದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ತಾವು ದೂರು ನೀಡಿದ್ದು ತನಿಖೆ ನಂತರ ಸತ್ಯ ಅರಿವಾಗಲಿದೆ. ಈ ಸಂಬAಧ ವಿನಾಕಾರಣ ಸಭೆ ನಡೆಯಲು ಅಡ್ಡಿಪಡಿಸಬೇಡಿ ಎಂದು ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.

    ಆಡಿಯೋ ವೈರಲ್ ಬಗ್ಗೆ ತನಿಖೆ ನಡೆಸಲಿ. ಆದರೆ ನಗರ ಅಭಿವೃದ್ಧಿ ದೃಷ್ಟಿಯಿಂದ ಸಭೆ ನಡೆಸಲು ಯಾರೂ ಕೂಡ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಭೆ ಮುಂದುವರಿಯಲು ಅವಕಾಶ ಕಲ್ಪಿಸಲಾಯಿತು.

    ಸದಸ್ಯ ಅಜೆಯ್‌ಕುಮಾರ್ ಮಾತನಾಡಿ, ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿವರ್ಗ ನಗರಸಭಾ ಅಧ್ಯಕ್ಷರು ಮತ್ತು ಸದಸ್ಯರ ಮಾತನ್ನೇ ಕೇಳುತ್ತಿಲ್ಲ. ಮೂರು-ನಾಲ್ಕು ದಿನಗಳಾದರೂ ಬಡಾವಣೆಗಳಲ್ಲಿ ಕಸ ವಿಲೆವಾರಿ ಆಗುತ್ತಿಲ್ಲ. ಜನಪ್ರತಿನಿಧಿಗಳ ಮಾತಿಗೆ ಸಿಬ್ಬಂದಿ ಕಿಮ್ಮತ್ತು ನೀಡುತ್ತಿಲ್ಲವೆಂದು ಆರೋಪಿಸಿದಾಗ ಮತ್ತೋರ್ವ ಸದಸ್ಯೆ ಸ್ವಾತಿ ಮಂಜೇಶ್ 30ನೇ ವಾರ್ಡ್ನಲ್ಲಿ ಮೂರು ದಿನಗಳಾದರೂ ಕಸ ತೆಗೆಯಲು ಬರುತ್ತಿಲ್ಲವೆಂದರು.

     ನಗರದ ಮುಖ್ಯ ರಸ್ತೆಗಳಲ್ಲಿ ಕಳೆದ ಮೂರು ದಿನಗಳಾದರೂ ಕಸವನ್ನೇ ಎತ್ತುತ್ತಿಲ್ಲ. ನಡೆಯಿರಿ ಈಗಲೇ ಸ್ಥಳ ತನಿಖೆಗೆ ಹೋಗೋಣ ಕಸ ಎತ್ತಿದ್ದಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸದಸ್ಯ ಅಜೆಯ್‌ಕುಮಾರ್ ಹೇಳಿದಾಗ ಅಧ್ಯಕ್ಷರು ಎಲ್ಲಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

    ನಗರದ ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು ಯೋಗ್ಯವಲ್ಲದ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲು ಸೂಚಿಸಿದ್ದರೂ ಈ ಸಂಬಂಧ ವ್ಯಾಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಜೆಯ್‌ಕುಮಾರ್ ಆರೋಪಿಸಿದಾಗ ನಾಳೆಯಿಂದಲೇ ಕ್ರಮ ಕೈಗೊಳ್ಳುವಂತೆ ಸಭೆ ಸಮ್ಮತಿಸಿತು.

    ನಗರದಲ್ಲಿ 5,000ಕ್ಕೂ ಅಧಿಕ ಅಂಗಡಿ-ಮುಂಗಟ್ಟುಗಳಿದ್ದು ನಗರಸಭೆಯ ಪರವಾನಗಿ ಪಡೆಯದೆ ನಡೆಸಲಾಗುತ್ತಿದೆ. ಇದರಿಂದ ನಗರಸಭೆಯ ಆದಾಯವೂ ಕಡಿಮೆಯಾಗಿದೆ. ಮೊದಲು ಅಂಗಡಿಗಳಿಗೆ ಪರವಾನಗಿ ಪಡೆಯುವಂತೆ ಮಾಡಿ ನಗರಸಭೆಯ ಆದಾಯಕ್ಕೆ ಕತ್ತರಿ ಬೀಳದಂತೆ ನೋಡಿಕೊಳ್ಳಿ ಎಂದು ಸದಸ್ಯ ಶಿವಶಂಕರ್ ಹೇಳಿದರು.

    ನಗರದ ಮಲ್ಲಿಕಾಪುರ, ಕರೇಕಲ್ಲಹಟ್ಟಿ, ಸ.ನಂ. 5, 6 ರಂಗನಾಥ ನಗರ ಸೇರಿದಂತೆ ಹಲವೆಡೆ ಮನೆ ಕಟ್ಟಿಕೊಂಡು ಫಲಾನುಭವಿಗಳು ವಾಸಿಸುತ್ತಿದ್ದು, 94 ಸಿಸಿ ಕಾಯ್ದೆಯಡಿ ಹಣ ತುಂಬಿದ್ದರೂ ತಹಸೀಲ್ದಾರ್ ಅವರು ಹಕ್ಕು ಪತ್ರ ನೀಡಿಲ್ಲ. ಈ ಕೂಡಲೇ ಅವರಿಗೆ ನ್ಯಾಯ ದೊರಕಬೇಕು ಎಂದು ಸದಸ್ಯ ಆರ್.ರಾಮು ಹೇಳಿದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಂದಾಯ ಇಲಾಖೆಯ ಈ ಸ್ಥಳಗಳನ್ನು ನಗರಸಭೆಗೆ ವರ್ಗಾಯಿಸಿಕೊಳ್ಳಲು ಕ್ರಮ ವಹಿಸಲು ಸಭೆ ತೀರ್ಮಾನಿಸಿತು.

    ಸಭಾ ನಡಾವಳಿಕೆಯಲ್ಲಿ ಕೆಲ ಸ್ಥಳೀಯ ಟ್ರಸ್ಟ್ಗಳಿಗೆ ಸಿ.ಎ. ಸೈಟ್ ನೀಡುವ ಸಂಬಂಧ ವಿಷಯ ಪ್ರಸ್ತಾಪವಾದಾಗ ಸದಸ್ಯ ಅಜೆಯ್‌ಕುಮಾರ್, ಆರ್.ರಾಮು, ಶಿವಶಂಕರ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು.

    ಪತ್ರಕರ್ತರ ಸಂಘದವರು ಕಳೆದ 30 ವರ್ಷಗಳಿಂದಲೂ ಸಿ.ಎ. ಸೈಟ್ ಕೇಳುತ್ತಿದ್ದಾರೆ. ಈ ಹಿಂದೆ ಅರ್ಜಿಗಳನ್ನೂ ಸಲ್ಲಿಸಿದ್ದು ಈವರೆಗೂ ನಿವೇಶನ ನೀಡಿಲ್ಲ. ಕ್ರಿಯಾಶೀಲವಲ್ಲದ ಟ್ರಸ್ಟ್ಗಳಿಗೆ ಸಿ.ಎ. ಸೈಟ್ ನೀಡಕೂಡದು. ಒಂದು ವೇಳೆ ನೀಡುವುದಿದ್ದರೆ ಸಮಗ್ರ ದಾಖಲಾತಿ ಪಡೆದು ಮುಂಬರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಎಂದು ಆರ್.ರಾಮು, ಅಜೆಯ್‌ಕುಮಾರ್ ಸಲಹೆ ನೀಡಿದರು.

    ಅರ್ಜಿ ಸಲ್ಲಿಸಿದ ತಕ್ಷಣ ಸಿ.ಎ. ಸೈಟ್ ನೀಡಲು ಹೇಗೆ ಸಾಧ್ಯ? ಆ ಟ್ರಸ್ಟ್ನ ಸೇವೆ ಏನು? ಸಾಮಾಜಿಕ ಕಳಕಳಿ ಎಂಥಾದ್ದು ಎಂಬ ಸಮಗ್ರ ವಿಷಯ ಮನಗಂಡು ಅರ್ಹ ದಾಖಲೆ ಪಡೆದು ನಿವೇಶನ ನೀಡಬೇಕು. ಸದ್ಯಕ್ಕೆ ಯಾವ ಟ್ರಸ್ಟ್ಗೂ ಸಿ.ಎ. ಸೈಟ್ ನೀಡಬೇಡಿ ಎಂದು ಆರ್.ರಾಮು ಒತ್ತಡ ಹೇರಿದಾಗ ಸದರಿ ವಿಷಯದ ತೀರ್ಮಾನವನ್ನು ಸಭೆ ಮುಂದೂಡಿತು.

    ಈವರೆಗೂ ನಗರದಲ್ಲಿ ಸಿ.ಎ. ಸೈಟ್‌ಗಳು ಎಲ್ಲಿವೆ ಎಂದು ಗುರ್ತಿಸುವ ಕೆಲಸವೇ ನಡೆದಿಲ್ಲ. ಸಿ.ಎ. ಸೈಟ್ ಗುರ್ತಿಸಿದ ನಂತರ ಅರ್ಹವಾದ ಟ್ರಸ್ಟ್ಗಳಿಗೆ ಮಾತ್ರ ನಿವೇಶನ ನೀಡಬೇಕು ಎಂದು ಶಿವಶಂಕರ್ ಸಲಹೆ ನೀಡಿದರು.ನಗರದ ಅನೇಕ ಮುಖ್ಯ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿ ಎಂದು ಸದಸ್ಯೆ ಉಮಾ ವಿಜಯರಾಜ್ ಸಭೆಯ ಗಮನಕ್ಕೆ ತಂದಾಗ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

    ನಗರಸಭೆಯ ಉಪಾಧ್ಯಕ್ಷೆ ಅಂಬುಜಾ ನಟರಾಜ್, ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಎಲ್. ರಂಗನಾಥ್, ಪ್ರಭಾರ ಆಯುಕ್ತರಾದ ಪಲ್ಲವಿ, ಪ್ರಭಾರ ಕಂದಾಯಾಧಿಕಾರಿ ವಿಶ್ವೇಶ್ವರಯ್ಯ ಸೇರಿದಂತೆ ಹಲವು ಪ್ರಮುಖರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap