ಯಲಹಂಕ :
ಯಲಹಂಕ ವಿಧಾನಸಭಾ ಕ್ಷೇತ್ರ ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಪವಿತ್ರ ವೆಂಕಟರಾಮ್ ರಾಜೀನಾಮೆ ತೆರವಾದ ಸ್ಥಾನಕ್ಕೆ ಬೇರೆ ಯಾವುದೇ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಸುಜಾತ ರೇವಣ್ಣ ರವರು ಆಯ್ಕೆಯಾದರು.ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಬಿಜೆಪಿಯ ಮುಖಂಡರು ಶುಭ ಕೋರಿದರು.
ಶುಭಕೋರಿ ಮಾತನಾಡಿದ ಗ್ರಾ ಪಂ ಸದಸ್ಯ ಸತೀಶ್ ಕುಮಾರ್ ( ಶಶಿ) ರವರು ಇನ್ನು ಉಳಿದ ಅವಧಿಗೆ ನೂತನವಾಗಿ ನಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಆಯ್ಕೆಯಾದ ಸುಜಾತ ರೇವಣ್ಣನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ನಮ್ಮ ಪಂಚಾಯತಿ ಅಲ್ಲ ಗ್ರಾಮಗಳನ್ನು ನಮ್ಮ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರ ಸಹಕಾರದಿಂದ ಅಭಿವೃದ್ಧಿಪಡಿಸಿ ನಮ್ಮ ಪಂಚಾಯತಿಯನ್ನು ಮೊದಲನೇ ಸ್ಥಾನಕ್ಕೆ ತರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲೀಲಾವತಿ ಮೈಲಾರಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಸತೀಶ್ ಕುಮಾರ್ (ಶಶಿ ), ಸರಸ್ವತಿ ಮಾಯಣ್ಣ, ತಿಮ್ಮಕ್ಕ ಉದ್ದುಂಡಯ್ಯ, ರಾಮಕೃಷ್ಣಯ್ಯ, ಆನಂದ್, ಪ್ರಕಾಶ್ ಗೌಡ, ರಜಿನಿ ರಮೇಶ್, ರಮ್ಯಾ ವಿಜಯ್ ಕುಮಾರ್, ಮಹೇಶ್ ಲಕ್ಷ್ಮಿದೇವಮ್ಮ, ಬಿಜೆಪಿ ಬಿಜೆಪಿ ಮುಖಂಡರಾದ ಕೊಳಿಗಾನಹಳ್ಳಿ ವೆಂಕಟೇಶ್, ಲಕ್ಷ್ಮಣ್ ಗೌಡ್ರು ಸೇರದಂತೆ ಇನ್ನು ಅನೇಕ ಮುಖಂಡರು ಶುಭ ಹಾರೈಸಿದರು.








