ಮಧುಗಿರಿ:-
ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಪಂಯ ಅಧ್ಯಕ್ಷರಾಗಿ ಶ್ರೀಮತಿ ದಿವ್ಯಶ್ರೀ ಬೀರಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕವಣದಾಲ ಗ್ರಾಮ ಪಂಚಾಯಿತಿಯಲ್ಲಿ 19 ಜನ ಸದಸ್ಯರ ಸಂಖ್ಯಾಬಲವಿದ್ದು ಈ ಹಿಂದೆ ಕವಣದಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ರತ್ನಮ್ಮ ನವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 19 ಜನ ಸದಸ್ಯರಲ್ಲಿ ಶ್ರೀಮತಿ ದಿವ್ಯಶ್ರೀ ಬೀರಣ್ಣ ರವರು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಶ್ರೀಮತಿ ದಿವ್ಯಶ್ರೀ ಬೀರಣ್ಣ ರವರನ್ನು ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು. ಇನ್ನೂ ಈ ಹಿಂದೆ ಇದ್ದ ಉಪಾಧ್ಯಕ್ಷೆ ಕೋಟೆಮ್ಮ ರವರು ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ನೂತನ ಅಧ್ಯಕ್ಷೆ ಶ್ರೀಮತಿ ದಿವ್ಯಶ್ರೀ ಬೀರಣ್ಣ ಮಾತನಾಡಿ ನಮ್ಮ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ದಿಗಾಗಿ ಎಲ್ಲಾ ಸದಸ್ಯರ ಸಹಕಾರ ಪಡೆಯಲಾಗುವುದು, ಗ್ರಾಮಗಳಲ್ಲಿರುವ ನೀರು, ಚರಂಡಿ, ಬೀದಿ ದೀಪ, ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಗ್ರಾಮಗಳ ಅಭಿವೃದ್ದಿ ಮಾಡಲಾಗುವುದು, ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಕೆ ಎನ್ ರಾಜಣ್ಣನವರು ಹಾಗೂ ರಾಜೇಂದ್ರಣ್ಣ ರವರ ಆಶೀರ್ವಾದದಿಂದ ನನ್ನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲು ಸಹಕರಿಸಿದ ಗ್ರಾಪಂ ಸರ್ವಸದಸ್ಯರು, ಊರಿನ ಮುಖಂಡರು ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.
ಸದಸ್ಯ ಜಗನ್ನಾಥ್ ಮಾತನಾಡಿ: ನೂತನ ಅಧ್ಯಕ್ಷರಾಗಿ ದಿವ್ಯಶ್ರೀ ಬೀರಣ್ಣ ರವರನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮಗಳ ಅಭಿವೃದ್ದಿಗೆ ಎಲ್ಲಾ ಸದಸ್ಯರು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಗ್ರಾಪಂ ಸದಸ್ಯರುಗಳಾದ ಶಿವಣ್ಣ, ಮೂಡಲಪ್ಪ, ರಂಗಸ್ವಾಮಿ, ನಾಗರಾಜು, ಸೌಭಾಗ್ಯಮ್ಮ, ಲಕ್ಷ್ಮಿಕಾಂತ್, ಪುಟ್ಟಲಕ್ಷ್ಮಯ್ಯ, ಹಾಗೂ ಸರ್ವ ಸದಸ್ಯರು ಹಾಜರಿದ್ದು ಗ್ರಾಮದ ಮುಖಂಡರಾದ ಮಹಾಲಿಂಗಯ್ಯ ಸಿದ್ದಗಂಗರಾಜು ಮಧು ಹನುಮಂತ ರಾಯಪ್ಪ , ಸೇರಿದಂತೆ ಹಲವರು ಹಾಜರಿದ್ದರು.
