ಸಿದ್ಧಗಂಗಾ ಮಠಕ್ಕಿಂದು ಅಯೋಧ್ಯಯ ಪವಿತ್ರ ಅಕ್ಷತೆ

ತುಮಕೂರು:

    ಅಯೋಧ್ಯೆಯಲ್ಲಿ ಶ್ರೀರಾಮ ಲಾಲನ ಪ್ರತಿಷ್ಠಾಪನಾ ಕಾರ್ಯಕ್ರಮವು 2024ರ ಜನವರಿ 22 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ದೇವರಿಗೆ ಅರ್ಪಿಸಲಾದ ಪವಿತ್ರ ಅಕ್ಷತೆಯು ಇಂದು ಸಿದ್ಧಗಂಗಾ ಮಠಕ್ಕೆ ಆಗಮಿಸಲಿದೆ. ಇಂದು ಸಂಜೆ 4 ಗಂಟೆಗೆ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸ್ವಾಗತ ಮಾಡಿ ಬೆಳ್ಳಿರಥದಲ್ಲಿ ಪವಿತ್ರ ಅಕ್ಷತೆಯನ್ನು ಕಳಶದಲ್ಲಿಟ್ಟು ಪೂಜೆ ಮಾಡುವರು. ನಂತರ ತುಮಕೂರಿಗೆ ಸಂಜೆ 5 ಗಂಟೆಗೆ ಆಗಮಿಸುವ ಪವಿತ್ರ ಅಕ್ಷತೆಯನ್ನು ಶಂಕರ ಮಠದಿಂದ ಬಿಜಿಎಸ್ ವೃತ್ತದಲ್ಲಿರುವ ನಾಗರಕಟ್ಟೆಗೆ ಬೃಹತ್ ಶೋಭಾ ಯಾತ್ರೆಯಲ್ಲಿ ತರಲಾಗುವುದು.

     ಸಂಜೆ 5 ಗಂಟೆಗೆ ನಡೆಯುವ ಶೋಭಾ ಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳು, ವಿವಿಧ ಸಮಾಜದ ಮುಖಂಡರು ಮತ್ತು ಶ್ರದ್ಧ ಹಿಂದೂ ಬಾಂಧವರು ಹಾಗೂ ರಾಜಕೀಯ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದಾರೆ. 108 ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap