ರಾಮನವಮಿ : ಮಧುವಣಗಿತ್ತಿಯಂತೆ ತಯಾರಾದ ಅಯೋಧ್ಯೆ…..!

ಖನೌ:

     ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾದ ನಂತರದ ಮೊದಲ ರಾಮನವಮಿ ಉತ್ಸವ. ಹೀಗಾಗಿ ಇಂದಿನಿಂದ ಏಪ್ರಿಲ್ 19ರ ತನಕ ವಿಶೇಷ ದರ್ಶನ, ಆರತಿ ಪಾಸ್‌ಗಳನ್ನು ರದ್ದುಗೊಳಿಸಿರುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ.

    ಶ್ರೀರಾಮ ನವಮಿಯ ದಿನ (ಏಪ್ರಿಲ್ 17) ದಂದು, ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ (3:30 AM ) ಬಾಲರಾಮನ ದರ್ಶನ ಪ್ರಾರಂಭವಾಗಲಿದೆ, ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಇರುತ್ತದೆ. ದರ್ಶನ ಮತ್ತು ಆರತಿ ಇತ್ಯಾದಿಗಳಿಗೆ ಎಲ್ಲಾ ವಿಶೇಷ ಪಾಸ್ ಬುಕಿಂಗ್, ಏಪ್ರಿಲ್ 16 ರಿಂದ ಏಪ್ರಿಲ್ 18ರ ವರಗೆ ಈಗಾಗಲೇ ರದ್ದುಗೊಳಿಸಲಾಗಿದೆ. ಭಗವಂತನ ದರ್ಶನಕ್ಕೆ ಎಲ್ಲರೂ ಒಂದೇ ಮಾರ್ಗವನ್ನು ಅನುಸರಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.

    ಮಂಗಳ ಆರತಿಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ದರ್ಶನದ ಅವಧಿಯನ್ನು 19 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ನಾಲ್ಕು ಭೋಗ್ ನೈವೇದ್ಯಗಳ ಸಮಯದಲ್ಲಿ ಕೇವಲ ಐದು ನಿಮಿಷಗಳ ಕಾಲ ಪರದೆ ಮುಚ್ಚಲಾಗುತ್ತದೆ. ಗಣ್ಯ ಅತಿಥಿಗಳು ಏಪ್ರಿಲ್ 19 ರ ನಂತರ ಮಾತ್ರ ದರ್ಶನಕ್ಕೆ ಭೇಟಿ ನೀಡಬೇಕೆಂದು ಟ್ರಸ್ಟ್‌ ವಿನಂತಿಸಿದೆ.

    ಶ್ರೀರಾಮ ಜನ್ಮೋತ್ಸವದ ಆಚರಣೆಯನ್ನು ಅಯೋಧ್ಯೆ ನಗರದಾದ್ಯಂತ ಸುಮಾರು ನೂರು ದೊಡ್ಡ ಎಲ್‌ಇಡಿ ಪರದೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಟ್ರಸ್ಟ್‌ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೇರ ಪ್ರಸಾರವೂ ಇರುತ್ತದೆ ಎಂದು ಟ್ರಸ್ಟ್‌ ಹೇಳಿದೆ.

     ರಾಮನವಮಿ (ಏಪ್ರಿಲ್ 17) ಬ್ರಾಹ್ಮಿ ಮುಹೂರ್ತದ 3.30ಕ್ಕೆ ಮಂಗಳ ಆರತಿಯ ನಂತರ, ಅಭಿಷೇಕ, ಶೃಂಗಾರ ಮತ್ತು ದರ್ಶನ ಸೇರಿ ಮುಂಜಾನೆಯ ಧಾರ್ಮಿಕ ವಿಧಿಗಳು ಪ್ರಾರಂಭವಾಗುತ್ತದೆ. ಶೃಂಗಾರ ಆರತಿಯು ಮುಂಜಾನೆ 5:00 ಗಂಟೆಗೆ ನಡೆಯುತ್ತದೆ. ಪ್ರಭು ಶ್ರೀ ರಾಮಲಲ್ಲಾ ಮತ್ತು ಇತರ ಎಲ್ಲಾ ಪೂಜಾ ವಿಧಿವಿಧಾನಗಳು ಏಕಕಾಲದಲ್ಲಿ ಮುಂದುವರಿಯುತ್ತದೆ. ಪ್ರಭು ಶ್ರೀರಾಮನಿಗೆ ನೈವೇದ್ಯ (ಭೋಗ್) ಅರ್ಪಿಸಲು ಪರದೆ ಎಳೆಯುವಾಗ ಅಲ್ಪಾವಧಿಯ ಅಂತರವಿರುತ್ತದೆ.

    ಭಕ್ತರು ಈ ಮಧ್ಯಂತರಗಳಲ್ಲಿ ತಾಳ್ಮೆಯಿಂದ ಕಾಯಬೇಕು ಮತ್ತು ಪ್ರಭು ಶ್ರೀರಾಮನ ನಾಮವನ್ನು ಜಪಿಸುವುದನ್ನು ಮತ್ತು ಆತನನ್ನು ಸ್ತುತಿಸುವುದನ್ನು ಮುಂದುವರಿಸಬೇಕು. ಭಗವಂತನ ದರ್ಶನವು ರಾತ್ರಿ 11ರ ವರೆಗೆ ಮುಂದುವರಿಯುತ್ತದೆ. ನಂತರ ಪರಿಸ್ಥಿತಿಗೆ ಅನುಗುಣವಾಗಿ ನೈವೇದ್ಯ ಮತ್ತು ಶಯನ ಆರತಿ ಇರುತ್ತದೆ. ಶಯನ ಆರತಿಯ ನಂತರ ಮಂದಿರ ನಿರ್ಗಮನ ದ್ವಾರದ ಬಳಿ ಪ್ರಸಾದ ವಿನಿಯೋಗ ನಡೆಯಲಿದೆ. 

ಸಂದರ್ಶಕರು ತಮ್ಮ ಮೊಬೈಲ್ ಫೋನ್‌ಗಳು, ಬೂಟುಗಳು, ಚಪ್ಪಲಿಗಳು, ದೊಡ್ಡ ಬ್ಯಾಗ್‌ಗಳು ಮತ್ತು ನಿರ್ಬಂಧಿತ ವಸ್ತುಗಳನ್ನು ಸುರಕ್ಷಿತವಾಗಿ ಮತ್ತು ದೂರದಲ್ಲಿ ಇರಿಸಿಕೊಳ್ಳಲು ಸಲಹೆ ಟ್ರಸ್ಟ್ ಸಲಹೆ ನೀಡಿದೆ.

     ಏಪ್ರಿಲ್ 16, 17, 18, ಮತ್ತು 19 ರಂದು ಸುಗಮ ದರ್ಶನ ಪಾಸ್, ವಿಐಪಿ ದರ್ಶನ ಪಾಸ್, ಮಂಗಳ ಆರತಿ ಪಾಸ್, ಶೃಂಗಾರ ಆರತಿ ಪಾಸ್ ಮತ್ತು ಶಯನ್ ಆರತಿ ಪಾಸ್‌ನಂತಹ ಯಾವುದೇ ಪಾಸ್‌ಗಳನ್ನು ನೀಡಲಾಗುವುದಿಲ್ಲ.

     ಇದರರ್ಥ ಈ ದಿನಗಳಲ್ಲಿ ಎಲ್ಲ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಲಾಗಿರುತ್ತದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಶ್ರೀರಾಮ ನವಮಿಯ ನಂತರ, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯಾ ಧಾಮಕ್ಕೆ ಭೇಟಿ ನೀಡಿ ಪ್ರಭು ಶ್ರೀ ರಾಮಲಲ್ಲಾನ ಆಶೀರ್ವಾದ ಪಡೆಯಬಹುದು ಮತ್ತು ಪ್ರಸಾದ ಸ್ವೀಕರಿಸಬಹುದು. ಶ್ರೀರಾಮ ನವಮಿಯ ದಿನದ ಅನಗತ್ಯ ಜನದಟ್ಟಣೆ ತಪ್ಪಿಸಲು ಗಮನಹರಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.

    ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಾತ್ರಾರ್ಥಿ ಸೇವಾ ಕೇಂದ್ರವನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ದಿಂದ ಹೊರಗೆ ಸುಗ್ರೀವ್ ಕೋಟೆಯ ಬುಡದಲ್ಲಿ, ಬಿರ್ಲಾ ಧರ್ಮಶಾಲಾ ಎದುರು, ಶ್ರೀ ರಾಮ ಜನ್ಮಭೂಮಿಯ ಪ್ರವೇಶದ್ವಾರದ ಬಳಿ ಸ್ಥಾಪಿಸಲಾಗಿದೆ. 

    ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದೆಲ್ಲೆಡೆ ಸ್ಥಾಪಿಸಲಾದ 80 ರಿಂದ 100 ಎಲ್‌ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ಪ್ರಸಾರ ಭಾರತಿ ಈ ಉಪಕ್ರಮವನ್ನು ಕೈಗೊಂಡಿದೆ. ಇದೇ ನೇರ ಪ್ರಸಾರವನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಎಲ್ಲರೂ ತಮ್ಮ ತಮ್ಮ ಮನೆಯಿಂದಲೂ ನೋಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap