ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಅಜೀಂ ಪ್ರೇಂಜಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ…..!

ಬೆಂಗಳೂರು:

    ಬೆಂಗಳೂರಿನ ಇಬ್ಲೂರು ಜಂಕ್ಷನ್‌ನಲ್ಲಿ ಟ್ರಾಫಿಕ್  ಸಮಸ್ಯೆಗೆ ಪರಿಹಾರಕ್ಕೆ ಆಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರಿಗೆ  ಪತ್ರ ಬರೆದಿದ್ದಾರೆ. ನಗರದ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‌ ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯನವರು ಅಜೀಂ ಪ್ರೇಮ್‌ಜಿಗೆ ಪತ್ರ ಬರೆದಿದ್ದು, ಹೊರ ವರ್ತುಲ ರಸ್ತೆಯಲ್ಲಿರುವ  ವಿಪ್ರೋ ಕ್ಯಾಂಪಸ್‌  ಮೂಲಕ ಸಾರ್ವಜನಿಕರ ವಾಹನ ಸಂಚಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

   ಸಿಎಂ ಮನವಿಗೆ ಅಜೀಂ ಪ್ರೇಮ್‌ಜಿ ಸ್ಪಂದಿಸಿದರೆ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಕಡಿಮೆಯಾಗುವ ಸಾಧ್ಯತೆಯಿದೆ. ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‌ ನಲ್ಲಿ ವಿಪರಿತಯವಾಗಿ ವಾಹನ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಖುದ್ದು ಸಿಎಂ ಸಿದ್ದರಾಮಯ್ಯನವರೇ ಮುಂದೆ ಬಂದಿದ್ದಾರೆ. ಪೀಕ್ ಅವರ್ ನಲ್ಲಿ ವಿಪ್ರೋ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಸಿಎಂ ಸಿದ್ದರಾಮಯ್ಯನವರು ಅಜೀಂ ಪ್ರೇಮ್‌ಜಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

   ಟ್ರಾಫಿಕ್ ಮತ್ತು ನಗರ ಸಾರಿಗೆ ತಜ್ಞರು ಮಾಡಿರುವ ಪ್ರಾಥಮಿಕ ಅಧ್ಯಯನದ ಪ್ರಕಾರ, ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಹೊರ ವರ್ತುಲ ರಸ್ತೆಗಳಲ್ಲಿ ಶೇಕಡಾ 30 ರಷ್ಟು ಟ್ರಾಫಿಕ್ ಕಡಿಮೆಯಾಗಬಹುದು. ಅದರಲ್ಲೂ ಕಚೇರಿ ಸಮಯಗಳಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಪತ್ರದಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

   ಮುಖ್ಯವಾಗಿ ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸಿದ್ದರಾಮಯ್ಯನವರೇ, ಕ್ಯಾಂಪಸ್‌ ಒಳಗಿನಿಂದ ಸಂಚಾರಕ್ಕೆ ಸಾರ್ವಜನಿಕ ವಾಹನಕ್ಕೆ ಅವಕಾಶ ಮಾಡಿಕಟ್ಟರೆ ಟ್ರಾಫಿಕ್ ಜಾಮ್ ಕಡಿಮೆಯಾಗಬಹುದು ಎನ್ನುವ ಗಮನದಲ್ಲಿಟ್ಟುಕೊಂಡು ಈ ಪತ್ರ ಬರೆದಿದ್ದಾರೆ.

Recent Articles

spot_img

Related Stories

Share via
Copy link