ಬೆಂಗಳೂರು:
ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ. ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವುದು ಚುನಾವಣಾ ಪ್ರಣಾಳಿಕೆ ಅಲ್ಲ,ಅದೊಂದು “ಸುಳ್ಳಿನ ಘೋಷಣಾ” ಪತ್ರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಕ್ಷ ಇತಿಹಾಸದಲ್ಲೇ ಕ್ರಾಂತಿಕಾರಿ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್ ಪ್ರಣಾಳಿಕೆ ಎದುರು ಬಿಜೆಪಿಯ ಪ್ರಣಾಳಿಕೆ ಸರಿಸಾಟಿಯೇ ಇಲ್ಲ ಎಂಬುದನ್ನು ತಜ್ಞರು ಮಾತ್ರವಲ್ಲ, ದೇಶದ ಸಾಮಾನ್ಯ ಜನರೇ ಮಾತಾಡುವಂತಾಗಿದೆ. ಅದಕ್ಕೆ ಈ ಹತ್ತು ಕಾರಣಗಳೇ ಸಾಕು ಎಂದಿದ್ದಾರೆ.
ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ನಂತರ, ದೇಶದ ಜನರ ಸಮಸ್ಯೆಗಳ ಅಂಶಗಳನ್ನೇ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬಿಜೆಪಿ:- ಪ್ರಣಾಳಿಕೆಯನ್ನು ಮೋದಿಯವರ ಹೊಗಳಿಕೆಗೆ ಮೀಸಲಿಟ್ಟಿರುವುದು ದುರಂತ. 69, ಬಾರಿ ಮೋದಿಯ ಜಪ, 53 ಬಾರಿ ಮೋದಿಯ ವರ್ಣನೆ ಮಾಡಲಾಗಿದೆ.