ಅಧಿಕಾರ ಶಾಶ್ವತ ಅಲ್ಲ; ಬಿ.ವೈ.ರಾಘವೇಂದ್ರ ಗುಡುಗು

ಶಿವಮೊಗ್ಗ:

    ಅಧಿಕಾರ ಶಾಶ್ವತ ಅಲ್ಲ. ಈ ರೀತಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಗುಡುಗಿದ್ದಾರೆ.

     ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರು , ಶಾಸಕರ ಕಡೆಯವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಮೊದಲು ಕಾರು ಜಖಂ ಮಾಡಿದ್ದರು. ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ

    ಭದ್ರಾವತಿಗೆ ಕಳಂಕ ತರುವಂತಹ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಮಟ್ಕಾ, ಜೂಜು ಇಸ್ಪೀಟು ದಂಧೆ ನಡೆಯುತ್ತಿದೆ. ಗೋಕುಲ್ ಕೃಷ್ಣನ್ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಈ ರೀತಿ ಗೂಂಡಾಗಿರಿ ಮಾಡೋದು ಸರಿಯಲ್ಲ ಎಂದು ‘ಕೈ’ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ರಾಜಕಾರಣ ಮಾಡಲು ಕಾರ್ಯಕರ್ತರಿದ್ದಾರೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಹಾಕಿಕೊಂಡಿರುವ ಯೂನಿಫಾರ್ಮ್ಗೆ ಮರ್ಯಾದೆ ಕೊಟ್ಟು ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡುವ ಒಳ್ಳೆಯ ಕೆಲಸದ ಮೇಲೆ ಹಣೆಬರಹ ಬರೆಯುತ್ತದೆ. ಗೂಂಡಾಗಿರಿ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಇಡೀ ಜಿಲ್ಲೆಯಲ್ಲಿ ಭದ್ರಾವತಿಯಲ್ಲಿ ಜೂಜು, ಮಟ್ಕಾ, ಇಸ್ಪೀಟು ಜೋರಾಗಿ ನಡೆಯುತ್ತಿದೆ. ಕೆಲವು ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಇಂತಹ ಕೃತ್ಯಕ್ಕೆ ಷಡ್ಯಂತ್ರ ಮಾಡ್ತಿದ್ದಾರೆ. ಶಿವಮೊಗ್ಗದಲ್ಲಿ ಇಂತಹ ಕೆಟ್ಟ ರಾಜಕಾರಣ ಯಾವಾಗಲೂ ನಡೆದಿಲ್ಲ ಎಂದಿದ್ದಾರೆ.

    ಸಂಸತ್ತಿನಲ್ಲಿ ಆಗಿದ್ದು ಅತ್ಯಂತ ಗಂಭೀರ ವಿಚಾರ. 3-4 ವ್ಯಕ್ತಿಗಳು ಎರಡು ಮೂರು ತಿಂಗಳಿನಿಂದ ಮಾಕ್ ಟ್ರಯಲ್ ಮಾಡಿದ್ದಾರೆ. ವಿದ್ಯಾವಂತರಿದ್ದಾರೆ, ಈ ರೀತಿ ಕೆಟ್ಟ ಕೆಲಸ ಮಾಡಲು ಏನು ಕಾರಣ? ಎಲ್ಲವೂ ತನಿಖೆ ಮುಖಾಂತರ ಹೊರಗೆ ಬರಲಿದೆ. ನಾನೇ ಆದರೂ ಕರ್ನಾಟಕದವರು ಅಂದ್ರೆ ದೆಹಲಿಯಲ್ಲಿ ಹೆಚ್ಚು ಪ್ರೀತಿ. ಹೀಗಾಗಿ ಸಹಜವಾಗಿ ಮೈಸೂರಿನವರು ಅಂತಾ ಪಾಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap