`ಬಾಬ್ರಿ ಮಸೀದಿ ಧ್ವಂಸ’ ಪ್ರಕರಣ ತೀರ್ಪು : ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳಿಗೆ ಕ್ಲೀನ್​ ಚಿಟ್!!

ನವದೆಹಲಿ : 

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಾಗಿದ್ದ ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ದೋಷಮುಕ್ತರಾಗಿದ್ದಾರೆ.

    ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಅವರು ಬುಧವಾರ(ಸೆಪ್ಟೆಂಬರ್ 30, 2020) ಪ್ರಕಟಿಸಿದ್ದು, ಪ್ರಮುಖ ಆರೋಪಿಗಳಾದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಸೇರಿದಂತೆ ಎಲ್ಲಾ ಆರೋಪಿಗಳು ದೋಷಮುಕ್ತರು ಎಂದು ತಿಳಿಸಿದೆ.

Did Supreme Court uphold the claim that Babri Masjid was built by  demolishing a temple?

    ಬಾಬ್ರಿ ಮಸೀದಿ ಧ್ವಂಸ ಘಟನೆ ಪೂರ್ವನಿಯೋಜಿತ ಕೃತ್ಯ ಅಲ್ಲ. ಇದು ಆಕಸ್ಮಿಕವಾಗಿ ನಡೆದದ್ದು. ಆರೋಪ ಸಾಬೀತು ಪಡಿಸಲು ಪ್ರಬಲ ಸಾಕ್ಷ್ಯಗಳು ಇಲ್ಲ. ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ಮೂಲಕ 28 ವರ್ಷಗಳ ನಂತರ ಬಿಜೆಪಿ ಹಿರಿಯ ನಾಯಕರಿಗೆ ಬಿಗ್​ ರಿಲೀಫ್​​ ಸಿಕ್ಕಂತಾಗಿದೆ.

     ನ್ಯಾಯಾಧೀಶ ಎಸ್.ಕೆ.ಯಾದವ್ ಅವರು ಬರೋಬ್ಬರಿ ಎರಡು ಸಾವಿರ ಪುಟಗಳ ತೀರ್ಪನ್ನು ಬರೆಯಿಸಿದ್ದು, ಅಂತಿಮ ತೀರ್ಪನ್ನು ಪ್ರಕಟಿಸಿದ್ದಾರೆ. ನ್ಯಾಯಾಧೀಶರಿಗೆ ವಿಶೇಷ ಭದ್ರತೆಯನ್ನು ಕೂಡಾ ಸರ್ಕಾರ ನೀಡಿತ್ತು.

 

Recent Articles

spot_img

Related Stories

Share via
Copy link
Powered by Social Snap